ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಮೀಣರ ಆರ್ಥಿಕ ಬೆಳವಣಿಗೆಗೆ ಸಂಘ ಸಹಾಯಕ: ಟಿ.ಬಿ. ಕೆಂಚರಡ್ಡಿ

Published : 31 ಆಗಸ್ಟ್ 2024, 16:03 IST
Last Updated : 31 ಆಗಸ್ಟ್ 2024, 16:03 IST
ಫಾಲೋ ಮಾಡಿ
Comments

ಗುರ್ಲಾಪುರ (ಮೂಡಲಗಿ): ‘ಗ್ರಾಮೀಣ ಜನರ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರ ಸಂಘಗಳು ಬಹಳಷ್ಟು ಅನುಕೂಲವಾಗಿವೆ’ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಟಿ.ಬಿ. ಕೆಂಚರಡ್ಡಿ ಹೇಳಿದರು.

ಇಲ್ಲಿಯ ಗುರ್ಲಾಪುರ ಅರ್ಬನ್‌ ಕೋ.ಆಪ್‌ ಕ್ರೆಡಿಟ್‌ ಸೊಸೈಟಿಯ 20ನೇ ವಾರ್ಷಿಕ ಸಭೆಯ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ‘ಸಹಕಾರಿ ಸಂಸ್ಥೆಯ ಬೆಳವಣಿಗೆಯಲ್ಲಿ ಆಡಳಿತ ಮಂಡಳಿ, ಸಿಬ್ಬಂದಿ, ಠೇವಣಿದಾರರು ಮತ್ತು ಸದಸ್ಯರ ಪರಸ್ಪರ ಸಹಕಾರ ಮತ್ತು ವಿಶ್ವಾಸ ಮುಖ್ಯ’ ಎಂದರು.

ಸಂಘದ ಅಧ್ಯಕ್ಷ ಶಿವಬಸು ಇಟ್ನಾಳ ಮಾತನಾಡಿ, ‘ಸಂಘವು ಪ್ರಸಕ್ತ ಮಾರ್ಚ್ ಕೊನೆಯಲ್ಲಿ ₹3 ಕೋಟಿ ದುಡಿಯುವ ಬಂಡವಾಳದೊಂದಿಗೆ ₹5.50 ಲಕ್ಷ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗಿದೆ’ ಎಂದರು.

ಈರಯ್ಯ ಹಿರೇಮಠ, ಶಿವರುದ್ರಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಭೀಮಪ್ಪ ಮರಾಠೆ, ಕೆ.ಆರ್. ದೇವರಮನಿ, ಎಸ್.ಎಸ್. ಮುಗಳಖೋಡ, ಕಾರ್ಯದರ್ಶಿ ಶ್ರೀಶೈಲ್ಲ ಮುಗಳಖೋಡ, ಬಸಪ್ಪ ಮುಗಳಖೋಡ, ಶಂಕರ ಮುಗಳಖೋಡ, ಮಹಾದೇವ ಕುಗೋಡ, ಪುಂಡಲೀಕ ಮುಗಳಖೋಡ, ಅಪ್ಪಯ್ಯ ಹಳ್ಳೂರ, ಮಹಾದೇವ ನಡುವಿನಕೇರಿ, ಬಸಪ್ಪ ಟಪಾಲದಾರ, ಆರ್.ಬಿ. ನೇಮಗೌಡರ, ಎ.ಜಿ. ಶರಣಾರ್ಥಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT