ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರಿ ಸಂಘ ಶಾಖೆ ಉದ್ಘಾಟನೆ

Last Updated 8 ಮಾರ್ಚ್ 2023, 16:32 IST
ಅಕ್ಷರ ಗಾತ್ರ

ಮುಗಳಖೋಡ: ‘ಗ್ರಾಮೀಣ ಭಾಗದ ಬಡವರ, ರೈತಾಪಿ ವರ್ಗದವರಿಗೆ ಬ್ಯಾಂಕಿನ ಸಕಲ ಸೌಲಭ್ಯಗಳು ದೊರೆಯುವಂತಾಗಬೇಕು’ ಎಂದು ಮುಗಳಖೋಡ– ಜಿಡಗಾ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಸಿದ್ಧಶ್ರೀ ಸೌಹಾರ್ದ ಸಹಕಾರಿ ಸಂಘದ 2ನೇ ಶಾಖೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ‘ದಿನವಿಡೀ ಬ್ಯಾಂಕಿಂಗ್‌ ಸೇವೆ ನೀಡುವ ಉದ್ದೇಶದಿಂದ ಇಲ್ಲಿ ಶಾಖೆ ತೆರೆದಿದ್ದೇವೆ’ ಎಂದರು.

ಸಂಘದ ಅಧ್ಯಕ್ಷರು ಚನ್ನಬಸಪ್ಪ ನಾಡಗೌಡರ ಅಧ್ಯಕ್ಷತೆ ವಹಿಸಿದ್ದರು. ಚಿನ್ಮಯಗಿರಿ ಮಠದ ಪೀಠಾಧಿಪತಿ ವೀರ ಮಹಾಂತ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿದರು. ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಪಿ.ರಾಜೀವ್, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ದುರ್ಯೋದನ ಐಹೊಳೆ, ಶಾಸಕ ಮಹಾದೇವಪ್ಪ ಯಾದವಾಡ, ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಸಿದ್ದು ಸವದಿ, ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಸಂಘ ನಿಯಮಿತ ನಿರ್ದೇಶಕ ಜಗದೀಶ ಕವಟಗಿಮಠ, ಪ್ರಧಾನ ವ್ಯವಸ್ಥಾಪಕ ಶಂಕರಗೌಡ ಪಾಟೀಲ ಮಾತನಾಡಿದರು.

ಸಿದ್ದಶ್ರೀ ಸೌಹಾರ್ದ ಸಹಕಾರಿ ಸಂಘದ ಪ್ರಧಾನ ನಿರ್ದೇಶಕರಾದ ಚನ್ನವೀರಯ್ಯ ಹಿರೇಮಠ, ನಿರ್ದೇಶಕಿ ಶೈಲಜಾ ತಪಲಿ, ಸುಶೀಲಕುಮಾರ ಬೆಳಗಲಿ, ಮಲಗೌಡ ಪಾಟೀಲ (ಶಂಕರಹಟ್ಟಿ) ಅಣ್ಣಪ್ಪಗೌಡ ಪಾಟೀಲ, ಪೈಲ್ವಾನ್ ಮಾರುತಿ ಗೋಕಾಕ ಸೇರಿದಂತೆ ಸಂಘದ ಎಲ್ಲ ನಿರ್ದೇಶಕರು, ಆಡಳಿತ ಮಂಡಳಿಯವರು, ಪುರಸಭೆ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT