ಕೊರೊನಾ ನಿಯಂತ್ರಣ: ಮಹಾಲಕ್ಷ್ಮಿಗೆ ಪ್ರಾರ್ಥನೆ

ಬೆಳಗಾವಿ: ಕೊರೊನಾ ನಿಯಂತ್ರಣಕ್ಕಾಗಿ ತಾಲ್ಲೂಕಿನ ಸುಳೇಭಾವಿ ಗ್ರಾಮದಲ್ಲಿ ಮಹಾಲಕ್ಷ್ಮೀದೇವಿ ಸೇರಿ ಎಲ್ಲ ದೇವರಿಗೆ ಮಂಗಳವಾರ ವಿಶೇಷ ಪೂಜೆ, ಅಭಿಷೇಕ ನೆರವೇರಿಸಿ ಮಂಗಳವಾರ ಪ್ರಾರ್ಥಿಸಲಾಯಿತು.
ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಸಮಿತಿ ನೇತೃತ್ವದಲ್ಲಿ ಪ್ರಮುಖರು ಮತ್ತು ಪೂಜಾರಿಗಳು ಪೂಜೆ ಸಲ್ಲಿಸಿದರು. ಕಲ್ಮೇಶ್ವರ, ವೀರಭದ್ರೇಶ್ವರ, ಯಲ್ಲಮ್ಮ ದೇವಿ, ಶಾಖಾಂಬರಿ ದೇವಿ, ಬನಶಂಕರಿ ದೇವಿ, ಮಹಾರಾಣಿ ದೇವಿ, ದುರ್ಗಾದೇವಿ, ಗಣೇಶ, ಮಾರುತಿ, ಬ್ರಹ್ಮ, ವಿಠ್ಠಲ-ರುಕ್ಮಿಣಿ ದೇವರನ್ನು ಪೂಜಿಸಿದರು.
ಹಿರಿಯರಾದ ಬಸನಗೌಡ ಪಾಟೀಲ ಮಾತನಾಡಿ, ‘ಕೊರೊನಾದಿಂದಾಗಿ ಜನರ ನೆಮ್ಮದಿ ಹಾಳಾಗಿದೆ. ದೇವರ ಆಶೀರ್ವಾದದಿಂದ ನಿಯಂತ್ರಣಕ್ಕೆ ಬರಲೆಂದು ಪೂಜೆ ಸಲ್ಲಿಸಲಾಗಿದೆ’ ಎಂದರು.
ಮುಖಂಡ ಶಶಿಕಾಂತ ಸಂಗೊಳ್ಳಿ, ‘ಕೊರೊನಾ ಕಾರಣದಿಂದ ದೇವಸ್ಥಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರಲಿಲ್ಲ. ತಿಂಗಳಿಂದ ಬಾಗಿಲು ತೆರೆಯಲಾಗಿದೆ. ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಮಾಸ್ಕ್ ಕಡ್ಡಾಯಗೊಳಿಸಲಾಗಿದೆ’ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.