ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಮಹಾನಗರ ಪಾಲಿಕೆ ಮತ ಎಣಿಕೆ: ಗೆದ್ದವರು, ಸೋತವರು ಯಾರು?

Last Updated 6 ಸೆಪ್ಟೆಂಬರ್ 2021, 5:47 IST
ಅಕ್ಷರ ಗಾತ್ರ

ಬೆಳಗಾವಿ: ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಸ್ಪರ್ಧೆಯಿಂದಾಗಿ ರಾಜ್ಯದ ಗಮನಸೆಳೆದಿರುವ ಮಹಾನಗರಪಾಲಿಕೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ.

58 ವಾರ್ಡ‌ುಗಳಿದ್ದು, 385 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯ 55 ಹಾಗೂ ಕಾಂಗ್ರೆಸ್‌ನ 45 ಅಭ್ಯರ್ಥಿಗಳ ರಾಜಕೀಯ ‌ಭವಿಷ್ಯವನ್ನು ಮತದಾರರು ಬರೆದಿದ್ದಾರೆ.

* ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ವಾರ್ಡ್ ನಂ.15ರಲ್ಲಿ ಬಿಜೆಪಿಯ ನೇತ್ರಾವತಿ ವಿನೋದ ಭಾಗವತ್ ಜಯ

*ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ವಾರ್ಡ್ ನಂ.11ರಲ್ಲಿ ಕಾಂಗ್ರೆಸ್‌ನ ಶಮೀವುಲ್ಲಾ ಮಾಡಿವಾಲೆ ಅವರಿಗೆ ಜಯ.

*ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ವಾರ್ಡ್ ನಂ.14ರಲ್ಲಿ ಪಕ್ಷೇತರ ಅಭ್ಯರ್ಥಿ ಶಿವಾಜಿ ಮಂಡೋಲ್ಕರ್ (ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ) ಅವರಿಗೆ ಜಯ.

*ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ವಾರ್ಡ್ ನಂ.18ರಲ್ಲಿ ಎಎಐಎಂಐಎಂ ಪಕ್ಷದ ಶಾಹಿದ್‌ಖಾನ್ ಪಠಾಣ್ ಅವರಿಗೆ ಜಯ.

*ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ವಾರ್ಡ್ ನಂ.1ರಲ್ಲಿ ಪಕ್ಷೇತರ ಅಭ್ಯರ್ಥಿ ಇಕ್ರಾ ಮುಲ್ಲಾ ಅವರಿಗೆ ಜಯ.

*ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ವಾರ್ಡ್ ನಂ.21ರಲ್ಲಿ ಬಿಜೆಪಿಯ ಪ್ರೀತಿ ವಿನಾಯಕ ಕಾಮಕರ ಅವರಿಗೆ ಜಯ.

*ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ವಾರ್ಡ್ ನಂ.12ರಲ್ಲಿ ಪಕ್ಷೇತರ ಅಭ್ಯರ್ಥಿ ಮೋದಿಮಸಾಬ ಮತವಾಲೆ ಅವರಿಗೆ ಜಯ.ನನಗೆ ಜಾರಕಿಹೊಳಿ‌ ಸಹೋದರರು ಸಹಾಯ ಮಾಡಿದರು. ಟಿಕೆಟ್ ಕೇಳಿದ್ದೆ ಕೊಡಲಿಲ್ಲ. ಹೀಗಾಗಿ, ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದೆ. ಯಾರ ಜೊತೆ ಹೋಗಬೇಕು ಎನ್ನುವುದನ್ನು ಮುಂದೆ ತೀರ್ಮಾನ ಮಾಡುತ್ತೇನೆ ಎಂದರು.ಮೂರು ದಶಕದ ಬಳಿಕ ಸ್ಪರ್ಧಿಸಿ ಗೆಲುವು ಪಡೆದ ಮಹಾದೇವಪ್ಪ. 1991ರಲ್ಲಿ ಸ್ಪರ್ಧಿಸಿದ್ದರು. ಬಳಿಕ ಈಗ ಸ್ಪರ್ಧೆ ಮಾಡಿ ಜಯ ಸಾಧಿಸಿದರು. 917 ಮತಗಳ ಅಂತರದ ಜಯ ಸಾಧಿಸಿದ ಮಹಾದೇವಪ್ಪ.ಶೆಟ್ಟರ್, ಜೋಶಿ ಆಶೀರ್ವಾದದಿಂದ ಗೆಲುವು ಸಾಧಿಸಿದ್ದೇನೆ. ವಾರ್ಡ್ ನಲ್ಲಿ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ಕೊಡುತ್ತೇನೆ. ಶಾಲಾ, ಕಾಲೇಜುಗಳ‌ ಸ್ವಚ್ಚತೆಗೆ ಅದ್ಯತೆ ಕೊಡುವೆ.

*ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ವಾರ್ಡ್ ನಂ.2ರಲ್ಲಿ ಕಾಂಗ್ರೆಸ್‌ನ ಮುಜಮ್ಮಿಲ್ ಡೋಣಿ ಅವರಿಗೆ ಜಯ. ಸತತ ಮೂರನೇ ಬಾರಿಗೆ ಅವರು ಆಯ್ಕೆಯಾಗಿದ್ದಾರೆ. ವಾರ್ಡ್‌ನಲ್ಲಿ ಹಿಂದಿನಿಂದಲೂ ಉತ್ತಮ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಜನರು ನನ್ನನ್ನು ಗೆಲ್ಲಿಸಿದ್ದಾರೆ. ಮುಂದೆಯೂ ಉತ್ತಮ ಕೆಲಸ ಮುಂದುವರಿಸುತ್ತೇನೆ ಎಂದರು.

* ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ವಾರ್ಡ್ ನಂ.29ರಲ್ಲಿ ಬಿಜೆಪಿಯ ನಿತಿನ್ ಜಾಧವ್ ಅವರಿಗೆ ಜಯ.

*ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ವಾರ್ಡ್ ನಂ.19ರಲ್ಲಿ ಪಕ್ಷೇತರ ಅಭ್ಯರ್ಥಿ ರಿಯಾಜ್ ಅಹಮದ್ ಕಿಲ್ಲೇದಾರ ಅವರಿಗೆ ಜಯ.

*ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ವಾರ್ಡ್ ನಂ.35ರಲ್ಲಿ ಬಿಜೆಪಿ ಅಭ್ಯರ್ಥಿ ಲಕ್ಷ್ಮಿ ರಾಠೋಡ್ ಅವರಿಗೆ ಜಯ.

*ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ವಾರ್ಡ್ ನಂ.27ರಲ್ಲಿ ಪಕ್ಷೇತರ ಅಭ್ಯರ್ಥಿ (ಎಂಇಎಸ್ ಬೆಂಬಲಿತ) ರವಿ ಸಾಳುಂಕೆ ಅವರಿಗೆ ಜಯ.

* ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ವಾರ್ಡ್ ನಂ.52ರಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಖುರ್ಷಿದ್ ಮುಲ್ಲಾ ಅವರಿಗೆ ಜಯ.

* ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ವಾರ್ಡ್ ನಂ.31ರಲ್ಲಿ ಬಿಜೆಪಿ ಅಭ್ಯರ್ಥಿ ವೀಣಾ ವಿಜಾಪುರೆ ಅವರಿಗೆ ಜಯ.

*ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ವಾರ್ಡ್ ನಂ.4ರಲ್ಲಿ ಬಿಜೆಪಿ ಅಭ್ಯರ್ಥಿ ಜಯತೀರ್ಥ ಸವದತ್ತಿ ಅವರಿಗೆ ಜಯ.

* ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ವಾರ್ಡ್ ನಂ.6ರಲ್ಲಿ ಬಿಜೆಪಿ ಸಂತೋಷ್ ಪೇಡ್ನೇಕರ ಅವರಿಗೆ ಜಯ.

* ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ವಾರ್ಡ್ ನಂ.5ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಫ್ರೋಜ್ ಮುಲ್ಲಾಅವರಿಗೆ ಜಯ.

*ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ವಾರ್ಡ್ ನಂ.30ರಲ್ಲಿ ಬಿಜೆಪಿ ಅಭ್ಯರ್ಥಿ ಬ್ರಹ್ಮಾನಂದ (ನಂದು) ಮಿರಜಕರ ಅವರಿಗೆ ಜಯ.

*ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ವಾರ್ಡ್ ನಂ.23ರಲ್ಲಿ ಬಿಜೆಪಿ ಅಭ್ಯರ್ಥಿ ಜಯಂತ್ ಜಾಧವ್ ಅವರಿಗೆ ಜಯ.

*ವಾರ್ಡ್ ನಂ.45ರಲ್ಲಿ ಬಿಜೆಪಿ ಅಭ್ಯರ್ಥಿ ರೂಪಾ ಚಿಕ್ಕಲದಿನ್ನಿ ಅವರಿಗೆ ಜಯ. ಅವರು ಮಾಜಿ ಮೇಯರ್ ಬಸಪ್ಪ ಚಿಕ್ಕಲದಿನ್ನಿ ಅವರ ಪತ್ನಿ.

*ವಾರ್ಡ್ ನಂ.8ರಲ್ಲಿ ಬಿಜೆಪಿ ಅಭ್ಯರ್ಥಿ ಜೋತಿಬಾ ನಾಯ್ಕ್ ಅವರಿಗೆ ಜಯ.

*ವಾರ್ಡ್ ನಂ.28ರಲ್ಲಿ ಬಿಜೆಪಿ ಅಭ್ಯರ್ಥಿ ರವಿ ಧೋತ್ರೆ ಅವರಿಗೆ ಸತತ ಮೂರನೇ ಬಾರಿಗೆ ಜಯ.

*ವಾರ್ಡ್ ನಂ.47ರಲ್ಲಿ ಪಕ್ಷೇತರ ಅಭ್ಯರ್ಥಿ ಅಸ್ಮಿತಾ ಭೈರಗೌಡ ಪಾಟೀಲ ಅವರಿಗೆ ಜಯ.

*ವಾರ್ಡ್ ನಂ.55ರಲ್ಲಿ ಬಿಜೆಪಿ ಅಭ್ಯರ್ಥಿ ಸವಿತಾ ಮುರುಘೇಂದ್ರಗೌಡ ಪಾಟೀಲ ಅವರಿಗೆ ಜಯ.

* ವಾರ್ಡ್ ನಂ.33ರಲ್ಲಿ ಬಿಜೆಪಿ ಅಭ್ಯರ್ಥಿ ರೇಷ್ಮಾ ಪ್ರವೀಣ ಪಾಟೀಲ ಅವರಿಗೆ ಜಯ.

*ವಾರ್ಡ್ ನಂ.58ರಲ್ಲಿ ಬಿಜೆಪಿ ಪ್ರಿಯಾ ದೀಪಕ ಸಾತಗೌಡ ಅವರಿಗೆ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT