ಶುಕ್ರವಾರ, ಅಕ್ಟೋಬರ್ 23, 2020
21 °C

ಸಾಂಬ್ರಾಗೆ ಬಿಟ್ಟು ಬಂದಿದ್ದೆ ವಾಪಸ್ ಬರಲಿಲ್ಲ: ನೋವು ಹಂಚಿಕೊಂಡ ಅಂಗಡಿ ಕಾರು ಚಾಲಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಮೂವತ್ತು ವರ್ಷಗಳಿಂದ ಅವರ ಕಾರ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಸೆ. 10ರಂದು ನಾನೇ ಸಾಂಬ್ರಾ ವಿಮಾನನಿಲ್ದಾಣಕ್ಕೆ ಹೋಗಿ ಅವರನ್ನು ಬಿಟ್ಟು ಬಂದಿದ್ದೆ. ಆದರೆ ಅವರು ವಾಪಸ್ ಬರಲೇ ಇಲ್ಲ...’

– ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಕಾರ್‌ ಚಾಲಕರಾಗಿದ್ದ ಮುದಕಪ್ಪ ನಾಯಕ ಅವರ ಪ್ರತಿಕ್ರಿಯೆ ನೀಡಿದ್ದು ಹೀಗೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ದೆಹಲಿಗೆ ಹೋದ ತಕ್ಷಣವೇ ಫೋನ್ ಮಾಡಿ ಹುಷಾರಾಗಿರುವಂತೆ ನನಗೆ ಸಲಹೆ ನೀಡಿದ್ದರು. ಎಂದಿಗೂ ನನ್ನನ್ನು ಕೆಲಸದವನು ಎಂದು ಅವರು ಭಾವಿಸಿರಲಿಲ್ಲ. ಕುಟುಂಬದವರಂತೆ ಕಾಣುತ್ತಿದ್ದರು. ಅವರ ಹಠಾತ್ ನಿಧನ ನೋವು ತಂದಿದೆ’ ಎಂದು ಕಣ್ಣೀರಿಟ್ಟರು.

‘ಜನಸಾಮಾನ್ಯರಿರಲಿ, ಯಾರೇ ಇರಲಿ ಸಮಸ್ಯೆ ಹೇಳಿಕೊಂಡರೆ ಕೂಡಲೇ ಸ್ಪಂದಿಸುತ್ತಿದ್ದರು’ಎಂದು ನೆನದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು