ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನಿಯಮ ಉಲ್ಲಂಘನೆ: ₹45.29 ಲಕ್ಷ ದಂಡ

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ
Last Updated 28 ಮೇ 2021, 15:58 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಕೋವಿಡ್–19 ನಿಯಮಗಳನ್ನು ಉಲ್ಲಂಘಿಸಿದವರಿಂದ ಶುಕ್ರವಾರದವರೆಗೆ ₹ 45.29 ಲಕ್ಷ ದಂಡ ಸಂಗ್ರಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

‘ಮಾಸ್ಕ್ ಧರಿಸದಿರುವುದು ಹಾಗೂ ಅಂತರ ಕಾಯ್ದುಕೊಳ್ಳದಿರುವ ಕುರಿತು 36,352, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ 240 ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರಲ್ಲಿ 117 ಪ್ರಕರಣಗಳನ್ನು ದಾಖಲಿಸಲಾಗಿದೆ. ಆಮ್ಲಜನಕ ಹಾಗೂ ರೆಮಿಡಿಸಿವರ್ ಕುರಿತು ಒಂದು ಪ್ರಕರಣ ದಾಖಲಾಗಿದೆ. ಇದುವರೆಗೆ 7,306 ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘7 ದಿನಗಳಿಂದ ಮಾಸ್ಕ್ ಧರಿಸದವರು ಹಾಗೂ ಅಂತರ ಕಾಯ್ದುಕೊಳ್ಳದಿರುವವರಿಂದ 6,043 ಪ್ರಕರಣಗಳು ಹಾಗೂ ಒಟ್ಟು ₹ 7.56 ಲಕ್ಷ ದಂಡ ಸಂಗ್ರಹಿಸಿಲಾಗಿದೆ’ ಎಂದು ತಿಳಿಸಿದ್ದಾರೆ.

ಸಮರ್ಪಕ ಆಮ್ಲಜನಕ ಲಭ್ಯತೆ:

‘ಜಿಲ್ಲೆಯಲ್ಲಿ ಸಮರ್ಪಕವಾಗಿ ಅಶ್ಯಕತೆಗನುಸಾರವಾಗಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಈ ಹಿಂದೆ ಜಿಲ್ಲೆಯಲ್ಲಿ ಒಟ್ಟು 15 ಕೆ.ಎಲ್. ಪೂರೈಕೆಯಾಗುತ್ತಿತ್ತು. ಈಗ ಸರ್ಕಾರದಿಂದ 24 ಕೆ.ಎಲ್. ಹಂಚಿಕೆಯಾಗಿದೆ. ಸ್ಥಳೀಯವಾಗಿ 3 ಸಂಸ್ಥೆಗಳಿಂದ 5 ಕೆ.ಎಲ್. ತಯಾರಿಕೆ ಆಗುತ್ತಿದ್ದು, ಕ್ರಮಬದ್ಧವಾಗಿ ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.

‘ಜಿಲ್ಲಾ ಕೇಂದ್ರದಲ್ಲಿ 1 ಹಾಗೂ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಒಂದರಂತೆ ಕೋವಿಡ್ ವಾರ್ ರೂಂ ಸ್ಥಾಪಿಸಲಾಗಿದೆ. ಅಲ್ಲಿ ಹೊಂ ಐಸೂಲೇಷನ್‌ನಲ್ಲಿರುವ ಸೋಂಕಿತರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರ ಆರೋಗ್ಯ ಹಾಗೂ ಚಿಕಿತ್ಸೆ ಬಗ್ಗೆ ವಿಚಾರಿಸಲಾಗುತ್ತಿದೆ. ಅವರಿಗೆ ಸಂಬಂಧಪಟ್ಟ ಪ್ರಥಮ ಸಂಪರ್ಕಿತರನ್ನು ಹೋಂ ಕ್ವಾರಂಟೈನ ಇರುವುದರ ಬಗ್ಗೆ ದೂರವಾಣಿ ಕರೆ ಮಾಡಿ ವಿಚಾರಿಸಲಾಗುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಲಭ್ಯವಿರುವ ಹಾಸಿಗೆಗಳ ವಿವರವನ್ನು ವಾರ್ ರೂಂನಲ್ಲಿ ಪಡೆಯಬಹುದು’.

ಕೋವಿಡ್ ಕೇರ್‌ ಕೇಂದ್ರಗಳು:

‘ಎಲ್ಲ ತಾಲ್ಲೂಕುಗಳಲ್ಲಿ 24 ಕೋವಿಡ್ ಕೇರ್ ಕೇಂದ್ರಗಳನ್ನು ತೆರೆಯಲಾಗಿದೆ. ಅವುಗಳಲ್ಲಿ ಒಟ್ಟು 1,233 ಹಾಸಿಗೆಗಳಿದ್ದು, ಅದರಲ್ಲಿ ಒಟ್ಟು 601 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ ಒಟ್ಟು 632 ಹಾಸಿಗೆಗಳು ಲಭ್ಯ ಇವೆ’.

‘ಜಿಲ್ಲೆಗೆ 36,99,050 ಕೋವಿಡ್ ಲಸಿಕೆ ಗುರಿ ನೀಡಲಾಗಿದೆ. ಇದರಲ್ಲಿ ಈವರೆಗೆ 7,17,075 ಜನರಿಗೆ ಲಸಿಕೆ ನೀಡಲಾಗಿದೆ. 5,78,347 ಜನ ಮೊದಲನೇಯ ಡೋಸ್ ಪಡೆದುಕೊಂಡಿದ್ದಾರೆ. 2ನೇ ಡೋಸ್ ಪಡೆದವರ ಸಂಖ್ಯೆ 1,38,728 ಆಗಿದೆ. 4,39,619 ಜನ 2ನೇ ಡೋಸ್ ಪಡೆಯಬೇಕಾಗಿದೆ‌. ಕೇಂದ್ರದಿಂದ 2,560 ವಯಲ್ ಹಾಗೂ ರಾಜ್ಯದಿಂದ 3,360 ವಯಲ್ ಕೋವ್ಯಾಕ್ಸಿನ್‌ ಲಸಿಕೆ ಪೂರೈಕೆಯಾಗಿದ್ದು, ಒಟ್ಟು 5,920 ವಯಲ್ ಸಿಕ್ಕಿದೆ. ಅಂತೆಯೇ ಕೇಂದ್ರದಿಂದ 6,310 ವಯಲ್ ಹಾಗೂ ರಾಜ್ಯದಿಂದ 8,850 ವಯಲ್‌ ಕೋವಿಶೀಲ್ಡ್‌ ಪೂರೈಕೆಯಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಕೋವಿಡ್ ಮರಣ ಪ್ರಮಾಣ ಕಡಿಮೆ’

ಸದ್ಯ 3,276 ವಯಲ್‌ ರೆಮ್‌ಡಿಸಿವಿರ್‌ ಜಿಲ್ಲಾ ಉಗ್ರಾಣದಲ್ಲಿ ಲಭ್ಯ ಇವೆ. ರೆಮಿಡಿಸಿವಿರ್‌ಗಾಗಿ ಆಸ್ಪತ್ರೆಯವರು ಜಾಲತಾಣದ ಮೂಲಕ ನೋಂದಣಿ ಮಾಡಿದಾಗ ನೇರವಾಗಿ ಪೂರೈಕೆ ಮಾಡಲಾಗುತ್ತಿದೆ. ರೆಮಿಡಿಸಿವಿರ್ ಹಂಚಿಕೆ ಅನುಸಾರ ಸಮರ್ಪಕವಾಗಿ ಹಂಚಿಕೆ ಮಾಡಲಾಗುತ್ತಿದೆ. ಎಲ್ಲರಿಗೂ ಅಗತ್ಯವಿರುವುದಿಲ್ಲ. ವೈದ್ಯರ ಸಲಹೆ ಮೇರೆಗೆ ಮಾತ್ರ ನೀಡಲಾಗುವುದು’ ಎಂದು ಹಿರೇಮಠ ಸ್ಪಷ್ಟಪಡಿಸಿದ್ದಾರೆ.

‘ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣ ಕಡಿಮೆ ಇದೆ. 10 ದಿನಗಳಿಂದ ಶೇ 0.87ರಷ್ಟಿದೆ. ಸಕ್ರಿಯ ಪ್ರಕರಣ ಶೇಕಡಾವಾರು (ಪಾಸಿಟಿವಿಟಿ ರೇಟ್) ಕಳೆದ 10 ದಿನಗಳಿಂದ ಶೇ 21.72ರಷ್ಟಿದೆ. ಚಿಕಿತ್ಸೆಗಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 4,146 ಹಾಸಿಗೆಗಳು ಲಭ್ಯವಿವೆ. ಕೋವಿಡ್-19 ರೋಗಿಗಳಿಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಹಾಸಿಗೆಗಳು ಲಭ್ಯವಿದ್ದು, ಇವುಗಳಲ್ಲಿ 2,357 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ 18ರಿಂದ 44 ವಯಸ್ಸಿನ 22,95,517 ಮಂದಿಗೆ ವರಿಗೆ ಲಸಿಕೆ ನೀಡುವ ಗುರಿ ಇದ್ದು, ಇದರಲ್ಲಿ ಮೇ 11ರಿಂದ 14,986 ಮಂದಿಗೆ ಕೊಡಲಾಗಿದೆ.
ಎಂ.ಜಿ. ಹಿರೇಮಠ
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT