ಬೆಳಗಾವಿ: ಕೊರೊನಾ ಸೋಂಕಿನ ವಿರುದ್ಧದ ಸಮರಕ್ಕೆ ಇಲ್ಲಿನ ಕೆಎಲ್ಇ ಸಂಸ್ಥೆಯ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕವು ಕೈ ಜೋಡಿಸಿದ್ದು, ಕೋವಿಡ್ ರೋಗಿಗಳ ಆರೈಕೆಗಾಗಿ ನಗರದ ಲಿಂಗರಾಜ ಕಾಲೇಜು ಕ್ಯಾಂಪಸ್ನಲ್ಲಿ ಐಸೊಲೇಷನ್ ಕೇಂದ್ರ ತೆರೆದಿದೆ.

‘ಜಿಲ್ಲೆಯಲ್ಲಿ ಕೋವಿಡ್ ಉಲ್ಬಣಗೊಂಡಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆ ಅಭಾವ ಕಾಡುತ್ತಿದೆ. ಸೋಂಕಿನ ಕಡಿಮೆ ಗುಣಲಕ್ಷಣವುಳ್ಳವರನ್ನು ಐಸೊಲೇಷನ್ಗೆ ಒಳಪಡಿಸಲು (ಪ್ರತ್ಯೇಕವಾಗಿ ಇರಿಸಲು) ಕೂಡ ಸಮಸ್ಯೆ ಆಗುತ್ತದೆ. ಇದನ್ನು ಮನಗಂಡು ಘಟಕವು 50 ಹಾಸಿಗೆಗಳ ಕೇಂದ್ರ ಪ್ರಾರಂಭಿಸಿದೆ’ ಎಂದು ಪ್ರಕಟಣೆ ತಿಳಿಸಿದೆ.

‘ಕೇಂದ್ರದಲ್ಲಿ ಉಳಿಯುವ ರೋಗಿಗಳು ಹಾಗೂ ಸಂಬಂಧಿಕರ ನಡುವೆ ಸಂಪರ್ಕ ಕಲ್ಪಿಸಲು ಜೂಮ್ ಆ್ಯಪ್ ಬಳಸಲಾಗುತ್ತದೆ. ಎರಡು ಪ್ರತ್ಯೇಕ ಕೊಠಡಿಗಳಲ್ಲಿ ಆ್ಯಪ್ ಬಳಸುವ ವ್ಯವಸ್ಥೆ ಇದೆ. ಮನೆಯವರ ಜೊತೆ ನಿತ್ಯವೂ ಮಾತನಾಡಬಹುದು. ಈ ಮೂಲಕ ರೋಗಿ ಹಾಗೂ ಅವರ ಸಂಬಂಧಿಕರ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಯತ್ನಿಸಲಾಗುತ್ತಿದೆ. ದಾಖಲಾಗುವವರಿಗೆ ಆರೋಗ್ಯಯುತ ಹಾಗೂ ಗುಣಮಟ್ಟದ ಆಹಾರ ಪದಾರ್ಥ ನೀಡಲಾಗುವುದು. ಸ್ಥೈರ್ಯ ಕುಂದದಂತೆ ನೋಡಿಕೊಳ್ಳಲು ಯೋಗಾಸನ ಹೇಳಿಕೊಡಲಾಗುವುದು’ ಎಂದು ಮಾಹಿತಿ ನೀಡಿದೆ.

‘ತಜ್ಞ ವೈದ್ಯರಿಂದ ದಿನದ 24 ಗಂಟೆಗಳ ಕಾಲ ಆರೈಕೆ ವ್ಯವಸ್ಥೆ ಮಾಡಲಾಗುತ್ತದೆ. ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಆಂಬುಲೆನ್ಸ್ ವ್ಯವಸ್ಥೆ ಇದೆ. ಆಮ್ಲಜನಕ ಹಾಸಿಗೆ ವ್ಯವಸ್ಥೆ ಇರುವುದಿಲ್ಲ. ಕಡಿಮೆ ಗುಣಲಕ್ಷಣಗಳು ಹೊಂದಿರುವವರನ್ನು ಮಾತ್ರವೇ ದಾಖಲಿಸಿಕೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಮೊ: 8197671083 /9986631942 ಸಂಪರ್ಕಿಸಬಹುದು’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.