ಬೆಳಗಾವಿ: ‘ಅಂತರ್ಜಾಲ ವಂಚಕರು ಹೊಸ ಹೊಸ ಮಾರ್ಗಗಳ ಮೂಲಕ ಸುಶಿಕ್ಷತರು ಸೇರಿದಂತೆ ಸಾಮಾನ್ಯ ಜನರನ್ನು ವಂಚನೆಗೊಳಪಡಿಸುತ್ತಿದ್ದಾರೆ. ಈ ವಂಚನೆ ತಡೆಗಟ್ಟಲು ಅಂತರ್ಜಾಲ ಬಳಕೆ ಕುರಿತು ಜಾಗೃತಿ ಹೊಂದಬೇಕು’ ಎಂದು ಎನ್.ಐ.ಸಿ ಜಿಲ್ಲಾ ಸಂಯೋಜಕ ಶಿರೀಶ್ ನಾಯಕ ಹೇಳಿದರು.

ಮಾಹಿತಿ ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಸುರಕ್ಷಿತ ಅಂತರ್ಜಾಲ ದಿನ–2026ರ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಅಂತರ್ಜಾಲದ ಮೂಲಕ ಇಡೀ ಜಗತ್ತಿನ ಮಾಹಿತಿಯನ್ನು ಅಂಗೈಯಲ್ಲಿ ಪಡೆಯಬಹುದು. ಅಂತರ್ಜಾಲದ ಮೂಲಕ ನಾವು ಸಾಕಷ್ಟು ಪ್ರಯೋಜನೆ ಪಡೆದುಕೊಳ್ಳ ಬಹುದಾಗಿದೆ. ಆದರೆ ಅಷ್ಟೇ ಅಪಾಯವು ಇದ್ದು, ಬಳಕೆ ಸಂದರ್ಭದಲ್ಲಿ ಜಾಗೂರಕರಾಗಿರಬೇಕು. ಭವಿಷ್ಯದಲ್ಲಿ ಸುರಕ್ಷಿತ ಆನ್ಲೈನ್ ಸೇವೆ ಅತ್ಯಗತ್ಯವಾಗಿದ್ದು ಇದರ ಸಾಧಕ, ಬಾಧಕಗಳ ಕುರಿತು ಅರಿತು ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿ, ಸಿಬ್ಬಂದಿ ಮುಂದಾಗುವಂತೆ’ ತಿಳಿಸಿದರು.

‘ಕೃತಕ ಬುದ್ಧಿಮತ್ತೆ (ಎಐ) ಬಗ್ಗೆ ಜಾಗೃತರಾಗಬೇಕು. ಎಐ ಸಂಬಂಧಿತ ಅಪಾಯಗಳ ಅರಿವು ಪ್ರತಿಯೊಬ್ಬರು ಸಂಪೂರ್ಣವಾಗಿ ಅರಿತುಕೊಳ್ಳಬೇಕು. ಯುಪಿಐ ಪೇಮೆಂಟ್ ಪಾವತಿಸುವಾಗ ಹಣ ವರ್ಗಾಯಿಸುವ ಸಂಖ್ಯೆ ಮತ್ತು ಲಿಂಕ್ ಅಧಿಕೃತವಾಗಿರುವ ಕುರಿತು ಖಚಿತ ಪಡಿಸಿಕೊಳ್ಳಬೇಕು’ ಎಂದೂ ಸಲಹೆ ನೀಡಿದರು.

ಸಾಮಾಜಿಕ ಜಾಲತಾಣ ಹ್ಯಾಕಿಂಗ್: ‘ದುರ್ಬಲ ಮತ್ತು ಮರುಬಳಕೆ ಮಾಡಿದ ಪಾಸ್ವರ್ಡ್ಗಳನ್ನು ಬಳಸಬಾರದು. ನಕಲಿ ವೆಬ್ಸೈಟ್ ಭೇಟಿ ಮತ್ತು ಲಿಂಕುಗಳ ಪ್ರವೇಶ ಅಪಾಯಕಾರಿ. ಇದರಿಂದ ವಂಚನೆಗೆ ಒಳಗಾಗುವ ಸಾಧ್ಯತೆ ಇವೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು ಕಾನೂನು ಬಾಹಿರ ಉದ್ದೇಶಗಳಿಗೆ ಬಳಸಲಾಗಿದೆ ಎಂದು ನಕಲಿ ಕರೆಗಳು ಬೆದರಿಕೆಗಳು ಬರುವ ಸಾಧ್ಯತೆ ಇದ್ದು, ಅಂತಹ ಕರೆಗಳು ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಅಥವಾ ಸೈಬರ್ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬೇಕು’ ಎಂದೂ ಹೇಳಿದರು.

‘ಪ್ರಮುಖ ಇ–ಕಾಮರ್ಸ್ ವೆಬ್ಸೈಟ್ ಮಾದರಿಯಲ್ಲಿ ವಿನ್ಯಾಸಗೊಳಿಸಿ ಸೂಕ್ಷ್ಮವಾಗಿ ಅಕ್ಷರ ಬದಲಾವಣೆ ಮೂಲಕ ಗ್ರಾಹಕರನ್ನು ಸೆಳೆದು ಮೋಸ ವಂಚನೆಗಳು ನಡೆಯುತ್ತಿವೆ. ಆದ್ದರಿಂದ ವೆಬ್ಸೈಟ್ ಖಾತ್ರಿಪಡಿಸಿಕೊಂಡು ಪ್ರವೇಶ ಮಾಡಬೇಕು. ಫಿಶಿಂಗ್ ವೆಬ್ಸೈಟ್ ಅಧಿಕೃತ ಬ್ಯಾಂಕ್ ಮಾದರಿಯಲ್ಲೇ ಇದ್ದು, ಕೆಲವು ವ್ಯತ್ಯಾಸ ಇರುತ್ತದೆ’ ಎಂದು ತಿಳಿಸಿದರು.

‘ವಂಚನೆ ಸಂದರ್ಭದಲ್ಲಿ 1930 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸ ಬಹುದು. ಸಹಾಯವಾಣಿಗೆ ದೂರು ದಾಖಲಿಸಿದ ನಂತರದ 24 ಗಂಟೆಯಲ್ಲಿ ಎಸ್.ಎಂ.ಎಸ್. ಮೂಲಕ ಸ್ವೀಕರಿಸಿದ ಸ್ವೀಕೃತ ಸಂಖ್ಯೆಯೊಂದಿಗೆ ಸೈಬರ ಸೆಲ್ನಲ್ಲಿ ಎಫ್.ಐ.ಆರ್. ದಾಖಲಿಸಬೇಕು’ ಎಂದು ಶಿರೀಶ್ ನಾಯಕ ತಿಳಿಸಿದರು.

ಕಾರ್ಯಾಗಾರದಲ್ಲಿ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.