ಬುಧವಾರ, ಜುಲೈ 28, 2021
28 °C

ಬೆಳಗಾವಿ ಲೋಕಸಭಾ ಕ್ಷೇತ್ರ; ಠೇವಣಿ ಕಳೆದುಕೊಂಡ 55 ಅಭ್ಯರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ 57 ಅಭ್ಯರ್ಥಿಗಳ ಪೈಕಿ ಇಬ್ಬರನ್ನು ಹೊರತುಪಡಿಸಿ ಇನ್ನುಳಿದವರೆಲ್ಲರ ಠೇವಣಿ ಹಣ ಸರ್ಕಾರಕ್ಕೆ ಜಪ್ತಿಯಾಗಿದೆ.

ಕ್ಷೇತ್ರದಲ್ಲಿ ಒಟ್ಟು 17,71,829 ಮತದಾರರು ಇದ್ದಾರೆ. ಇವರ ಪೈಕಿ 11,94,909 ಜನರು ಮತ ಚಲಾಯಿಸಿದ್ದರು. ತಾವು ಕಟ್ಟಿದ ಠೇವಣಿ ಹಣ ವಾಪಸ್‌ ಪಡೆಯಬೇಕಾದರೆ ಅಭ್ಯರ್ಥಿಗಳು ಚಲಾವಣೆಯಾದ ಒಟ್ಟು ಮತಗಳ ಪೈಕಿ 1/6ರಷ್ಟು (1,99,151) ಮತಗಳನ್ನು ಪಡೆಯಬೇಕಾಗಿತ್ತು. ಈ ನಿಬಂಧನೆಯನ್ನು ವಿಜೇತ ಅಭ್ಯರ್ಥಿ ಬಿಜೆಪಿಯ ಸುರೇಶ ಅಂಗಡಿ ಹಾಗೂ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಡಾ.ವಿ.ಎಸ್‌. ಸಾಧುನವರ ಮಾತ್ರ ಪೂರೈಸಿದ್ದಾರೆ. ಇನ್ನುಳಿದ 55 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು