ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯರಗಟ್ಟಿ: ಪಾಳುಬಿದ್ದ ಬಿಎಸ್‌ಎನ್ಎಲ್ ವಸತಿ ಗೃಹ

Published 13 ಜನವರಿ 2024, 14:28 IST
Last Updated 13 ಜನವರಿ 2024, 14:28 IST
ಅಕ್ಷರ ಗಾತ್ರ

ಯರಗಟ್ಟಿ: ಪಟ್ಟಣದಲ್ಲಿ ಭಾರತ ಸಂಚಾರ ನಿಗಮ ಲಿಮಿಟೆಡ್ [ಬಿಎಸ್,ಎನ್,ಎಲ್] ಕಚೇರಿ, ಮತ್ತು ಸಿಬ್ಬಂದಿಗಾಗಿ ಲಕ್ಷಾಂರತ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡ ಸುಮಾರು ವರ್ಷಗಳಿಂದ ಪಾಳು ಬಿದ್ದಿದ್ದು, ಉಪಯೋಗಕ್ಕೆ ಬಾರದೇ ಹಾಳಾಗಿದೆ.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಚೇರಿ ಇದ್ದು, ಪೂರ್ವದಲ್ಲಿ ಸಾಕಷ್ಟು ಸಿಬ್ಭಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರು, ಅವರಿಗೆ ಕೇಂದ್ರ ಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ವಸತಿ ಮತ್ತು ಕಚೇರಿ ಒಂದೇ ಕಡೆ ಕಟ್ಟಡ ನಿರ್ಮಿಸಿತ್ತು. ಕೇಂದ್ರ ಸರ್ಕಾರದ ಆದೇಶದಂತೆ ಸಿಬ್ಬಂದಿ ಸ್ವಯಂ ನಿವೃತ್ತಿ ಆದ ಹಿನ್ನೆಲೆಯಲ್ಲಿ ಕಟ್ಟಡದಲ್ಲಿ ಜನರ ವಾಸವಿಲ್ಲದೆ ಪಾಳು ಬಿದ್ದಿದೆ. ಅಚ್ಚುಕಟ್ಟಾದ ಕಟ್ಟಡ ಇದ್ದರೂ ಜನರು ವಾಸವಿಲ್ಲದೇ ಹಾಳಾಗುತ್ತಿದೆ.

ಬಿಎಸ್,ಎನ್,ಎಲ್ ಸಂಸ್ಥೆ ಸಿಬ್ಬಂದಿ ಹೊರತುಪಡಿಸಿ ಬೇರೆ ಇಲಾಖೆ ಸರ್ಕಾರಿ ನೌಕರರಿಗೂ ಈ ವಸತಿ ಗೃಹಗಳನ್ನು ಬಾಡಿಗೆ ನೀಡಬಹುದು. ಆದರೆ ಮಾಹಿತಿ ಕೊರತೆಯಿಂದ ಇಲ್ಲಿ ವಾಸಿಸಲು ಯಾರೂ ಮುಂದೆ ಬರುತ್ತಿಲ್ಲ. ಇದರಿಂದ ಸರ್ಕಾರದ ಹಣ ಪೋಲಾಗುತ್ತಿದೆ ಎಂಬುವುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ.

‘ಸಂಬಂಧಪಟ್ಟ ಅಧಿಕಾರಿಗಳು ಕಟ್ಟಡ ಹಾಳಾಗದಂತೆ ಸ್ವಚ್ಛಗೊಳಿಸಿ ಬಾಡಿಗೆದಾರರಿಗೆ ಬೇಕಾಗುವ ಮೂಲ ಸೌಕರ್ಯ ಒದಗಿಸಬೇಕು.
ಸಾರ್ವಜನಿಕ ಆಸ್ತಿ ರಕ್ಷಣೆ ಮಾಡಲು ಸೂಕ್ತ ಕ್ರಮಕ್ಕೆ ಮುಂದಾಗಬೇಕು’ ಎಂದು ದಲಿತ ಮುಖಂಡ ಮಂಜು ನೀಲಪ್ಪನ್ನವರ ಆಗ್ರಹಿಸಿದ್ದಾರೆ.

ನೂತನ ತಾಲ್ಲೂಕು: ದೊರೆಯದ ಸೌಲಭ್ಯ: ಯರಗಟ್ಟಿ ನೂತನ ತಾಲ್ಲೂಕು ಎಂದು ಘೋಷಣೆಯಾದರೂ ಇನ್ನೂ ಇಲ್ಲಿಗೆ ಪೂರ್ಣ ಸೌಲಭ್ಯಗಳು ಬಂದಿಲ್ಲ. ಹಾಳುಬಿದ್ದ, ದುಃಸ್ಥಿತಿಯಲ್ಲಿರುವ ಕಟ್ಟಡಗಳನ್ನು ಸರ್ಕಾರ ವಶಕ್ಕೆ ಪಡೆದು ಸರ್ಕಾರಿ ಕಚೇರಿಗಳನ್ನು ಆರಂಭಿಸಿ ಸದ್ಬಳಕೆ ಮಾಡಿಕೊಳ್ಳಬೇಕು ಎಂಬುವುದು ಇಲ್ಲಿನ ನಾಗರಿಕರ ಮನವಿಯಾಗಿದೆ.

ಸಾರ್ವಜನಿಕರ ಹಣವನ್ನು ಈ ರೀತಿ ಪೋಲು ಮಾಡದೇ ಸರ್ಕಾರಿ ಕಟ್ಟಡಗಳಿಗೆ ರಕ್ಷಣೆ, ಮೂಲಸೌಕರ್ಯ ಒದಗಿಸುವುದು ಸಂಬಂಧಪಟ್ಟವರ ಕೆಲಸ. ಈ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಗಮನ ಹರಿಸಬೇಕು ಎಂಬುವುದು ಜನರ ಮನವಿಯಾಗಿದೆ.

ಯರಗಟ್ಟಿ ನೂತನ ತಾಲ್ಲೂಕ ರಚನೆ ಆಗಿರುವುದರಿಂದ ಅನೇಕ ಕಟ್ಟಡಗಳ ಅವಶ್ಯಕತೆ ಇದೆ. ಈ ಕುರಿತು ಶಾಸಕ ವಿಶ್ವಾಸ್‌ ವೈದ್ಯ ಅವರ ಗಮನಕ್ಕೆ ತರಲಾಗುವುದು
ರಂಗಪ್ಪ ಅಣ್ಣಿಗೇರಿ. ಸಮಾಜ ಸೇವಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT