ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಕ್ಕೇರಿ: ಕ್ಲಸ್ಟರ್ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ

Published 16 ಆಗಸ್ಟ್ 2024, 13:39 IST
Last Updated 16 ಆಗಸ್ಟ್ 2024, 13:39 IST
ಅಕ್ಷರ ಗಾತ್ರ

ಹುಕ್ಕೇರಿ: 2024-25ನೇ ಸಾಲಿನ ಬಸಾಪೂರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಬಸಾಪೂರ ಸರ್ಕಾರಿ ಪ್ರೌಢ ಶಾಲೆಯ ಮೈದಾನದಲ್ಲಿ ಜರುಗಿತು.

ಬಸಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಭೀಮಶಿ ಕಳ್ಳಿಮನಿ ಟಾಸ್ ಚಿಮ್ಮವುದರ ಮೂಲಕ ಚಾಲನೆ ನೀಡಿದರು.

ಬಾಲಕರ ಕಬಡ್ಡಿ ಫೈನಲ್ ಪಂದ್ಯಾಟವು ಲಕ್ಷ್ಮಿ ಕಾನ್ವೆಂಟ್ ಬಸಾಪೂರ ಹಾಗೂ ಹಗೇದಾಳ ತಂಡದ ನಡುವೆ ಜರುಗಿತು.

ಬಸಾಪೂರ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಎಸ್.ಐ.ಗುಂಡಗಿ, ಶಿಕ್ಷಕರ ಸಂಘದ ರಾಜು ತಳವಾರ,ದೈಹಿಕ ಶಿಕ್ಷಕರಾದ ಬಿ ಬಿ ಮುಸಲ್ಮಾರಿ, ಶಮನೇಶ ಶಿವಣ್ಣಗೋಳ, ಅಶೋಕ ಪಾಟೀಲ, ಸರ್ಕಾರಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಾದ ಎಂ.ಎಚ್.ಮೊಮೀನ್, ವಿ. ಎಸ್.ಚರಂತಿಮಠ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT