ಬೆಳಗಾವಿ: ‘ಇಲ್ಲಿನ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಿಗೆ ಏ. 23ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಲಿರುವ ‘ಶತಾಯುಷಿ’ಗಳಿಗೆ ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನಕ್ಕಾಗಿ ಆಮಂತ್ರಣ ಪತ್ರ ನೀಡಲಾಗುವುದು ಮತ್ತು ವಿಶೇಷ ಸನ್ಮಾನ ಮಾಡಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

‘ಇಲ್ಲಿವರೆಗೆ ನಡೆದ ಚುನಾವಣೆಗಳಲ್ಲಿ ತಮ್ಮ ಅಮೂಲ್ಯವಾದ ಮತ ಚಲಾಯಿಸಿ ಪ್ರಜಾಪ್ರಭುತ್ವ ಗೆಲ್ಲಿಸುವಲ್ಲಿ ಅವರ ಕೊಡುಗೆ ಅನನ್ಯವಾಗಿದೆ. ಇಂತಹ ಹಿರಿಯರಲ್ಲಿ ನೂರು ವರ್ಷ ಪೂರೈಸಿದ ಮತದಾರರ ಮನೆಗೆ ಸೋಮವಾರ ತೆರಳಿ ವಿಶೇಷ ಸನ್ಮಾನಪತ್ರ ನೀಡಿ ಗೌರವಿಸಿ, ಆಮಂತ್ರಿಸಲಾಗುವುದು. ಅವರು ಮತಗಟ್ಟೆಗೆ ಬರಲು ಹಾಗೂ ಮನೆಗೆ ಮರಳಲು ವಾಹನ ಸೌಲಭ್ಯ ಒದಗಿಸಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ 65 ಮಂದಿ ಶತಾಯುಷಿ ಮತದಾರರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.