ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಅತ್ಯವಶ್ಯ: ಡಿಡಿಪಿಯು ವಿ.ಜಿ. ರಜಪೂತ

Last Updated 15 ಅಕ್ಟೋಬರ್ 2018, 12:15 IST
ಅಕ್ಷರ ಗಾತ್ರ

ಬೆಳಗಾವಿ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್‌ ಭಾಷೆ ಕಲಿಕೆಯು ಅತ್ಯವಶ್ಯವಾಗಿದೆ ಎಂದು ಡಿಡಿಪಿಯು ವಿ.ಜಿ. ರಜಪೂತ ಹೇಳಿದರು.

ಸರ್ದಾರ್ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದ ‘ವಿಶ್ವಾಸ ಕಿರಣ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿಶ್ವಾಸ ಕಿರಣ ಎಂಬ ಇಂಗ್ಲಿಷ್‌ ಭಾಷಾ ತರಬೇತಿ ವಿಶೇಷ ಕಾರ್ಯಕ್ರಮವನ್ನು ಸರ್ಕಾರ ಜಾರಿಗೊಳಿಸಿದೆ. ಇದರ ಸದುಪಯೋಗ ಪಡೆದುಕೊಂಡು, ಜೀವನದಲ್ಲಿ ಮುಂದೆ ಬರಬೇಕು’ ಎಂದು ತಿಳಿಸಿದರು.

ಮಧ್ಯಂತರ ರಜಾ ಅವಧಿಯ 8 ದಿನಗಳ ವಿಶೇಷ ತರಬೇತಿಯ ಸಂಯೋಜಕ ಚಿಂತಾಮಣ್‌ ರಾವ್ ಸರ್ಕಾರಿ ಕಾಲೇಜಿನ ಇಂಗ್ಲಿಷ್‌ ಉಪನ್ಯಾಸಕ ಜಿ.ಎಸ್. ಬೆಟಗೇರಿ, ‘ದ್ವಿತೀಯ ಪಿಯು ಪರೀಕ್ಷೆ ಇಂಗ್ಲಿಷ್ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆಯಲು ಈ ಯೋಜನೆ ಅನುಕೂಲಕರವಾಗಿದೆ’ ಎಂದರು.

ಸಂ‍ಪನ್ಮೂಲ ವ್ಯಕ್ತಿಗಳಾದ ಛಾಯಾ ಮೋರೆ, ನಿರ್ಮಲಾ ನಾಯ್ಕ ಇದ್ದರು. ಚೈತ್ರಾ ಖಾನಗೌಡ್ರ ಪ್ರಾರ್ಥಿಸಿದರು. ಹೇಮಲತಾ ಚೌಗಲೆ ಸ್ವಾಗತಿಸಿದರು. ಜಯಶ್ರೀ ಅಬ್ಬಿಗೇರಿ ನಿರೂಪಿಸಿದರು. ಶಂಕರ ಕಾಂಬಳೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT