ಬುಧವಾರ, ನವೆಂಬರ್ 30, 2022
17 °C

8ರಂದು ಅಣ್ಣಾಸಾಹೇಬ ಜೊಲ್ಲೆ ಜನ್ಮದಿನ: ಸಲಕರಣೆ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ‘ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಜನ್ಮದಿನದ ಅಂಗವಾಗಿ ಅ. 8ರಂದು 2,000 ಅಂಗವಿಕಲರಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಗುವುದು’ ಎಂದು ಯಕ್ಸಂಬಾದ ಬಸವಜ್ಯೋತಿ ಯುವ ಫೌಂಡೇಷನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಹೇಳಿದರು.

ಪಟ್ಟಣದಲ್ಲಿ ಗುರುವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ‘ಜೊಲ್ಲೆ ಪರಿವಾರದಲ್ಲಿ ಸಮಾಜ ಸೇವೆಯ ಮೂಲಕವೇ ಜನ್ಮ ದಿನ ಆಚರಿಸಿಕೊಳ್ಳುವ ರೂಢಿ ಇದೆ. ಈ ಬಾರಿ ₹ 75 ಲಕ್ಷ ಮೌಲ್ಯದ ಸಲಕರಣೆಗಳ ವಿತರಣೆ, ಕ್ಷಯದಿಂದ ಬಳಲುತ್ತಿರುವ 100 ಹಿರಿಯರಿಗೆ ‘ಡಯಟ್ ಕಿಟ್’ ನೀಡಲಾಗುವುದು’ ಎಂದರು.

‘ನಿಪ್ಪಾಣಿಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಅ.8ರಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು’ ಎಂದರು.

‘ಅವಸಾನದ ಅಂಚಿನಲ್ಲಿದ್ದ ನಿಪ್ಪಾಣಿ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಈಗ 8.5 ಮೆಟ್ರಿಕ್‌ ಟನ್ ಕಬ್ಬು ನುರಿಸುವ ಸಾಮರ್ಥ್ಯಕ್ಕೆ ಏರಿಸಿದ್ದು ಅಣ್ಣಾಸಾಹೇಬ ಜೊಲ್ಲೆ ಅವರು. ಹೀಗಾಗಿ, ಅವರ ಜನ್ಮದಿನದಂದೇ ಪ್ರಸಕ್ತ ವರ್ಷದ ಹಂಗಾಮು ಆರಂಭಿಸಲಾಗುವುದು. ಅವರು ಕಳೆದ 30 ವರ್ಷಗಳಿಂದ ನಡೆದುಬಂದ ಹಾದಿಯ ‘ವಿಡಿಯೊ ಡಾಕುಮೆಂಟರಿ’ ಅನಾವರಣ ಮಾಡಲಾಗುವುದು’ ಎಂದರು.

ಫೌಂಡೇಷನ್‌ ಮುಖಂಡ ಜ್ಯೋತಿಪ್ರಸಾದ ಜೊಲ್ಲೆ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ, ದುಂಡಪ್ಪ ಬೆಂಡವಾಡೆ, ಜಯಾನಂದ ಜಾಧವ, ಶಾಂಭವಿ ಅಶ್ವಥಪುರ, ಸಂಜಯ ಪಾಟೀಲ, ದೀಪಕ ಪಾಟೀಲ, ರವಿ ಹಂಜಿ, ಅನ್ವರ ದಾಡಿವಾಲೆ, ವಿಶ್ವನಾಥ ಕಾಮಗೌಡ, ವಿಜಯಭಾಸ್ಕರ ಇಟಗೋನಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು