ಸೋಮವಾರ, ಆಗಸ್ಟ್ 2, 2021
25 °C

ಬೆಳಗಾವಿಗೆ ಹೆಚ್ಚುವರಿ ಮತ ಯಂತ್ರ, ವಿವಿಪ್ಯಾಟ್ ಹಂಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಿಗೆ ಹೆಚ್ಚುವರಿಯಾಗಿ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್‌ಗಳನ್ನು ಭಾನುವಾರ ತೃತೀಯ ಹಂತದ ರ‍್ಯಾಂಡಮೈಜೇಷನ್ ಮೂಲಕ ಹಂಚಿಕೆ ಮಾಡಲಾಯಿತು.

ಚುನಾವಣಾ ವೀಕ್ಷಕರಾದ ರಾಜೀವಚಂದ್ರ ದುಬೆ, ಅಬು ಇಮ್ರಾನ್, ಜಿಲ್ಲಾ ಚುನಾವಣಾಧಿಕಾರಿ ಡಾ.ಆರ್. ವಿಶಾಲ್ ಹಾಗೂ ಮಾನ್ಯತೆ ಪಡೆದ ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರಕ್ರಿಯೆ ನಡೆಯಿತು.

ಜಿಲ್ಲಾಮಟ್ಟದಲ್ಲಿ ನಡೆದ ಮೊದಲ ರ‍್ಯಾಂಡಮೈಜೇಷನ್ ಮೂಲಕ ವಿಧಾನಸಭಾ ಕ್ಷೇತ್ರವಾರು ಮತಯಂತ್ರಗಳು ಮತ್ತು ವಿವಿಪ್ಯಾಟ್‌ಗಳನ್ನು ಹಂಚಿಕೆ ಮಾಡಲಾಗಿತ್ತು. ಬಳಿಕ ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಮತಗಟ್ಟೆಗಳಿಗೆ ಅವುಗಳ ಸಂಖ್ಯೆಗೆ ಅನುಗುಣವಾಗಿ ಮತಯಂತ್ರ ಮತ್ತು ವಿವಿಪ್ಯಾಟ್ ಹಂಚಿಕೆಗೆ ದ್ವಿತೀಯ ಹಂತದಲ್ಲಿ ರ‍್ಯಾಂಡಮೈಜೇಷನ್ ನಡೆಸಲಾಯಿತು. ಹೆಚ್ಚುವರಿಯಾಗಿ ಉಳಿದ ಸಿಯು (ಕಂಟ್ರೋಲ್ ಯುನಿಟ್), ಬಿಯು (ಬ್ಯಾಲೆಟ್ ಯುನಿಟ್) ಮತ್ತು ವಿವಿಪ್ಯಾಟ್‌ಗಳನ್ನು ತೃತೀಯ ಹಂತದ ರ‍್ಯಾಂಡಮೈಜೇಷನ್ ಮೂಲಕ ಹಂಚಿಕೆ ಮಾಡಲಾಯಿತು.

110 ಬಿಯು, 210 ಸಿಯು ಹಾಗೂ 385 ವಿವಿಪ್ಯಾಟ್‌ಗಳನ್ನು ಹಂಚಿಕೆ ಮಾಡಲಾಯಿತು. ಮೈಕ್ರೋ ಅಬ್ಸರ್ವರ್‌ಗಳು ಹಾಗೂ ಮತಗಟ್ಟೆ ಸಿಬ್ಬಂದಿಯನ್ನು ಕೂಡ ರ‍್ಯಾಂಡಮೈಜೇಷನ್ ಮೂಲಕ ನಿಯೋಜಿಸಲಾಯಿತು.

‘ಬೆಳಗಾವಿ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹೊಸದಾಗಿ ಬಂದಿರುವ ಮತಯಂತ್ರಗಳನ್ನು ಕೂಡ ನಿಯಮಾನುಸಾರ ಪರೀಕ್ಷಿಸಿ ಸಿದ್ಧಪಡಿಸಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದ ಅನುಸಾರ ಏ. 23ರಂದು ಬೆಳಿಗ್ಗೆ 5.30ಕ್ಕೆ ಅಣಕು ಮತದಾನ ನಡೆಯಲಿದೆ. ಮತದಾನ ಪ್ರಕ್ರಿಯೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಮಾಹಿತಿ ನೀಡಿದರು.

‘ಮತದಾನದ ಬಳಿಕ ಮತಯಂತ್ರಗಳು ಹಾಗೂ ವಿವಿಪ್ಯಾಟ್‌ಗಳನ್ನು ಇರಿಸುವ ಸ್ಟ್ರಾಂಗ್ ರೂಮ್ ಭದ್ರತೆಯ ಉಸ್ತುವಾರಿಯನ್ನು ಮೇ 23ರವರೆಗೆ ಕೇಂದ್ರದ ಅರೆಸೇನಾ ಪಡೆಗೆ ವಹಿಸಲಾಗುತ್ತದೆ’ ಎಮದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು