ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾರ ಪ್ರಮಾಣದ ಸ್ಫೋಟಕ ವಶ

ಬೆಳಗಾವಿ ಮತ್ತು ಯಾದರಿ ಜಿಲ್ಲೆಯಲ್ಲಿ ಪ್ರಕರಣ: ಆರೋಪಿಗಳ ಬಂಧನ
Last Updated 7 ಮಾರ್ಚ್ 2021, 19:46 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣದಲ್ಲಿ ಅಪಾರ ಪ್ರಮಾಣದ ಸ್ಫೋಟಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಹೊನಗಾದಲ್ಲಿ 6,675 ಕೆ.ಜಿ ಮತ್ತು ಯಾದಗಿರಿ ಜಿಲ್ಲೆಯ ಕೆಂಭಾವಿಯಲ್ಲಿ 750 ಕೆ.ಜಿ ಸ್ಪೋಟಕವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಶರು ತಿಳಿಸಿದ್ದಾರೆ.

ಬೆಳಗಾವಿ ತಾಲ್ಲೂಕಿನ ಹೊನಗಾ ಗ್ರಾಮದ ಬಳಿ ನಿಯಮ ಉಲಂಘಿಸಿ ಸಾಗಿಸುತ್ತಿದ್ದ ₹ 4 ಲಕ್ಷ ಮೌಲ್ಯದ 6,675 ಕೆ.ಜಿ. ಸ್ಫೋಟಕ ವಸ್ತು
ಗಳನ್ನು ಕಾಕತಿ ಠಾಣೆ ‍ಪೊಲೀಸರು ವಶಕ್ಕೆ ಪಡೆದಿದ್ದಾರೆ. ‘ಚಿಕ್ಕೋಡಿಯ ಬೊಬಲವಾಡದ ರಮೇಶ ರಾಯಪ್ಪ ಲಕ್ಕೊಟಿ, ರಾಜು ಈಶ್ವರ ಶಿರಗಾಂವಿ, ಮುಗಳಿಯ ಅರುಣ ಶ್ರೀಶೈಲ ಮಠದ ಬಂಧಿಸಲಾಗಿದೆ. ಮಾಲೀಕರನ್ನು ಬಂಧಿಸಬೇಕಾಗಿದೆ’ ಎಂದು ಡಿಪಿಸಿ ವಿಕ್ರಂ ಅಮಟೆ ತಿಳಿಸಿದ್ದಾರೆ.

750 ಕೆ.ಜಿ ಸ್ಫೋಟಕ ವಸ್ತು ಜಪ್ತಿ
ಯಾದಗಿರಿ ಜಿಲ್ಲೆಯ ಕೆಂಭಾವಿ ಸಮೀಪದ ಆಲ್ದಾಳ ಗ್ರಾಮದ ಕಲ್ಲು ಕ್ವಾರಿ ಯಲ್ಲಿ ಭಾನುವಾರ ಕಲ್ಲು ಗಣಿಗಾರಿಕೆಗೆ ಬಳಸಲ್ಪಡುವ 750 ಕೆ.ಜಿ ತೂಕದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಲಬುರ್ಗಿ–ಯಾದಗಿರಿ ಆಂತರಿಕ ಭದ್ರತಾ ವಿಭಾಗ (ಐಎಸ್‍ಡಿ) ಮತ್ತು ಜಿಲ್ಲಾ ಪೊಲೀಸರು ದಾಳಿ ನಡೆಸಿದರು. ಕ್ವಾರಿ ಮಾಲೀಕ ಶಾಂತಗೌಡ ನಡಹಳ್ಳಿ, ವಾಹನ ಚಾಲಕ ಮೌಲಾಲಿ ಮತ್ತು ಸ್ಫೋಟಕ ಸಾಗಣೆ ಮಾಡಿದ ರವಿ ಬಿರಾದಾರ ವಿರುದ್ಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT