ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು ಬೆಳಗಾವಿವರೆಗೆ ವಿಸ್ತರಿಸಲು ಕ್ರಮ: ಸೋಮಣ್ಣ

Published : 16 ಸೆಪ್ಟೆಂಬರ್ 2024, 5:32 IST
Last Updated : 16 ಸೆಪ್ಟೆಂಬರ್ 2024, 5:32 IST
ಫಾಲೋ ಮಾಡಿ
Comments

ಬೆಳಗಾವಿ: ‘ಪ್ರಯಾಣಿಕರ ಬೇಡಿಕೆಯಂತೆ ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲಿನ ಸೇವೆಯನ್ನು ಬೆಳಗಾವಿವರೆಗೆ ವಿಸ್ತರಿಸಲು ಕ್ರಮ ವಹಿಸಲಾಗುವುದು’ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಂಗಳೂರು–ಧಾರವಾಡ ವಂದೇ ಭಾರತ್‌ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸಲು ರೈಲ್ವೆ ಅಧಿಕಾರಿಗಳು ಏನು ತಾಂತ್ರಿಕ ಕಾರಣ ಕೊಟ್ಟಿದ್ದಾರೆ ಗೊತ್ತಿಲ್ಲ. ಆಗ ನಾನು ಸಚಿವನಾಗಿರಲಿಲ್ಲ. ಹಳೆಯದ್ದನ್ನೇ ಕೆದಕಿ ಕೆಲಸ ಮಾಡಲಾಗುವುದಿಲ್ಲ. ಬೆಂಗಳೂರು-ಬೆಳಗಾವಿ ಮಧ್ಯೆ ವಂದೇ ಭಾರತ್ ರೈಲು ಆರಂಭಿಸುವ ಕುರಿತು ಸಂಸದ ಜಗದೀಶ ಶೆಟ್ಟರ್‌ ಹಾಗೂ ಇತರೆ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಾಗಿದೆ. ಶೀಘ್ರದಲ್ಲೇ ಜನರಿಗೆ ಸೇವೆ ಒದಗಿಸಲು ಕ್ರಮ ವಹಿಸಲಾಗುವುದು’ ಎಂದರು.

‘ಬೆಳಗಾವಿ-ಚನ್ನಮ್ಮನ ಕಿತ್ತೂರು–ಧಾರವಾಡ ನೇರ ರೈಲು ಮಾರ್ಗ ನಿರ್ಮಾಣದ ಕಾಮಗಾರಿಗಳು ಶೀಘ್ರದಲ್ಲೇ ಆರಂಭವಾಗಲಿದ್ದು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ’ ಎಂದು ತಿಳಿಸಿದರು.

‘ಪುಣೆ-ಹುಬ್ಬಳ್ಳಿ ಮತ್ತು ಪುಣೆ–ಕೊಲ್ಹಾಪುರ ಮಧ್ಯೆ ವಂದೇ ಭಾರತ್ ರೈಲಿನ ಸಂಚಾರ ಇಂದು ಆರಂಭವಾಗಲಿದೆ. ಮಧ್ಯಾಹ್ನ ಕೊಲ್ಹಾಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ. ಸಂಜೆ ಬೆಳಗಾವಿಯಲ್ಲೂ ಈ ರೈಲು ಸ್ವಾಗತಿಸಲಿದ್ದೇನೆ’ ಎಂದರು.

ಬೆಳಗಾವಿ ಮತ್ತು ಮುಂಬೈ ಮಧ್ಯೆ ರಾತ್ರಿ ಅವಧಿಯಲ್ಲಿ ರೈಲು ಸಂಪರ್ಕ ಕಲ್ಪಿಸುವ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಸೋಮಣ್ಣ, ‘ಈ ಸಾಧ್ಯಾಸಾಧ್ಯತೆ ಆಧರಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಉತ್ತರಿಸಿದರು.

‘ನರೇಂದ್ರ ಮೋದಿ ಪ್ರಧಾನಿಯಾದ ನಂತರ, ದೇಶದಲ್ಲಿ ರೈಲ್ವೆ ಸೌಲಭ್ಯಗಳು ಮತ್ತು ಮೂಲಸೌಕರ್ಯ ಶೇ 100ರಷ್ಟು ಸುಧಾರಿಸಿದೆ. ಜನರು ಹೆಚ್ಚಿನ ಸೌಲಭ್ಯ ಪಡೆಯುತ್ತಿದ್ದಾರೆ. ಆರು ವಂದೇ ಭಾರತ್ ರೈಲುಗಳಿಗೆ ಭಾನುವಾರ ಧ್ವಜಾರೋಹಣ ಮಾಡಲಾಗಿದ್ದು, ಸೋಮವಾರ ಏಳು ರೈಲುಗಳಿಗೆ ಧ್ವಜಾರೋಹಣ ಮಾಡಲಾಗುತ್ತಿದೆ’ ಎಂದು ತಿಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT