ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಲಕ್ಷ್ಯದಿಂದ ಅಪಘಾತ ಹೆಚ್ಚಳ: ಡಿವೈಎಸ್ಪಿ ಎಸ್.ವಿ. ಗಿರೀಶ

Last Updated 18 ಸೆಪ್ಟೆಂಬರ್ 2019, 14:19 IST
ಅಕ್ಷರ ಗಾತ್ರ

ಅಥಣಿ: ‘ರಸ್ತೆ ಅಪಘಾತಗಳು ಸವಾರರು ಹಾಗೂ ಚಾಲಕರ ನಿರ್ಲಕ್ಷ್ಯದಿಂದ ಹೆಚ್ಚಾಗುತ್ತಿವೆಯೇ ಹೊರತು, ವಾಹನಗಳ ಸಮಸ್ಯೆಯಿಂದ ಸಂಭವಿಸುವುದಿಲ್ಲ’ ಎಂದು ಡಿವೈಎಸ್ಪಿ ಎಸ್.ವಿ. ಗಿರೀಶ ಹೇಳಿದರು.

ಇಲ್ಲಿನ ಕೆ.ಎ. ಲೋಕಾಪುರ ಪದವಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರ ವಿಭಾಗದಿಂದ ನೂತನ ನಿಯಮಗಳ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯುವಕರು ಬೇಕಾಬಿಟ್ಟಿಯಾಗಿ ವಾಹನಗಳನ್ನು ಓಡಿಸುತ್ತಾರೆ. ಅವರಿಗೆ ಸಂಚಾರ ನಿಯಮಗಳ ಅರಿವಿಲ್ಲ. ಹೀಗಾಗಿ, ಅಪಘಾತಗಳು ಹೆಚ್ಚುತ್ತಿವೆ. ಇದನ್ನು ತಡೆಯುವುದಕ್ಕಾಗಿ ನಿಯಮಗಳನ್ನು ಪಾಲಿಸಬೇಕು. ದಂಡ ಕಟ್ಟುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ವಿಮೆ ಮಾಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪಿಎಸ್‌ಐ ಉಸ್ಮಾನ್‌ ಅವಟಿ, ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಆರ್.ಎಂ. ದೇವರಡ್ಡಿ, ಉಪ ಪ್ರಾಚಾರ್ಯ ಗಿರೀಶ ಕುಲಕರ್ಣಿ ಮಾತನಾಡಿದರು.

ಪ್ರೊಬೆಷನರಿ ಪಿಎಸ್‌ಐ ಸಿ.ಕೆ. ಆನಂದ, ಅರ್ಥಶಾಸ್ತ್ರ ವಿಭಾಗದ ವಿ.ಎಂ. ದೇಶಪಾಂಡೆ, ಎಸ್.ಎ. ಗಡಗೆ, ರಾಜ್ಯಶಾಸ್ತ್ರ ವಿಭಾಗದ ಎಸ್.ಎಸ್. ಕಟಗೇರಿ, ಅರ್ಚನಾ ಪೂಜಾರಿ, ರಾಜಕುಮಾರ ಕಾಂಬಳೆ, ವಿಠೋಬಾ ತೋರತ್, ಸಂತೋಷ ಬಡಕಂಬಿ ಇದ್ದರು.

ದೀಪಾ ಮಾಳಿ ನಿರೂಪಿಸಿದರು. ಎಸ್.ಎ. ಗಡಗೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT