ಬುಧವಾರ, ಫೆಬ್ರವರಿ 26, 2020
19 °C

ಬೈಪಾಸ್‌ಗೆ ಕೃಷಿ ಜಮೀನು ಸ್ವಾಧೀನಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ತಾ‌ಲ್ಲೂಕಿನ ಹಲಗಾ-ಮಚ್ಚೆ ಬೈಪಾಸ್‌ ನಿರ್ಮಾಣಕ್ಕೆ ಕೃಷಿ ಜಮೀನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ಇಲ್ಲಿನ ಶಿವಬಸವ ನಗರದಲ್ಲಿರುವ ಉಪ ವಿಭಾಗಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ–4ರ ಅಧಿಕಾರಿಗಳ ಕಚೇರಿಗೆ ರೈತರು ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

‘ನಮ್ಮ ಜಮೀನು ನಮಗೆ ಬಿಟ್ಟು ಕೊಡಿ’ ಎಂದು ಅಧಿಕಾರಿಗಳ ಎದುರು ಕೆಲವು ಮಹಿಳೆಯರು ಕಣ್ಣೀರಿಟ್ಟರು.

‘ರಸ್ತೆಗಾಗಿ ಫಲವತ್ತಾದ ಜಮೀನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಹೋರಾಟ ನಡೆಸಿದ್ದರೂ ಸ್ಪಂದನೆ ದೊರೆತಿಲ್ಲ. ಅಧಿಕಾರಿಗಳು ನಮ್ಮ ಬದುಕಿನೊಂದಿಗೆ ಚೆಲ್ಲಾಟವಾಡುವುದು ಸರಿಯಲ್ಲ’ ಎಂದು ತಿಳಿಸಿದರು.

‘ಜಮೀನು ಕಸಿದುಕೊಂಡರೆ ಸಾಮೂಹಿಕ ಅತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಮುಂದಿನ ಅನಾಹುತಗಳಿಗೆ ಅಧಿಕಾರಿಗಳೇ ಹೊಣೆ ಆಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ರಾಜು ಮರವೆ, ಹನುಮಂತ ಬಾಳೇಕುಂದ್ರಿ, ಬಿ.ಬಿರ್ಜೆ, ತಾನಾಜಿ ಹಲಗೆಕರ, ಸುಭಾಷ ಲಾಡ, ಯಲ್ಲಪ್ಪ ತಾರಿಹಾಳಕರ, ಗಣಪತ ಜಾಂಗಳೆ, ಜಯಪಾಲ ದೇಸಾಯಿ, ಸಂತೋಷ ಆರೋಂದೇಕರ, ಬಾಳು ಕರಣಕರ, ರೋಹಿತ ಭಾಂದುರ್ಗೆ, ಲಕ್ಷ್ಮಣ ಪವಾರ, ಅಮಿತ ಉದಗಡಗಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು