ಮಂಗಳವಾರ, ನವೆಂಬರ್ 24, 2020
19 °C

ಗೀತಾ ದಾನಪ್ಪಗೋಳಗೆ ಕೆಎಲ್‌ಇ ಸತ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕ್ರೀಡಾ ಇಲಾಖೆಯಿಂದ ಕೊಡಮಾಡುವ 2018ನೇ ಸಾಲಿನ ‘ಏಕಲವ್ಯ’ ಪ್ರಶಸ್ತಿಗೆ ಭಾಜನವಾದ ಜುಡೋ ಪಟು ಗೀತಾ ದಾನಪ್ಪಗೋಳ ಅವರನ್ನು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು ಇಲ್ಲಿನ ಲಿಂಗರಾಜ ಕಾಲೇಜಿನಲ್ಲಿ ಸಂಸ್ಥೆ ಪರವಾಗಿ ಶನಿವಾರ ಗೌರವಿಸಿದರು.

ಗೋಕಾಕ ತಾಲ್ಲೂಕು ನಾಗನೂರದ ಗೀತಾ ಅವರನ್ನು ಸಂಸ್ಥೆಯು ಮೂರು ವರ್ಷಗಳಿಂದ ದತ್ತು ಪಡೆದು, ಆರ್ಥಿಕ ನೆರವಿನ ಜೊತೆಗೆ ತರಬೇತಿ ನೀಡುತ್ತಿದೆ.

‘ಯುವತಿಯರು ಕ್ರೀಡೆಯತ್ತ ಹೆಚ್ಚಿನ ಆಸಕ್ತಿ ಹೊಂದುತ್ತಿರುವುದು ಹೆಮ್ಮೆಯ ವಿಷಯ. ಗೀತಾ ಭರವಸೆಯ ಕ್ರೀಡಾಪಟು. ಗ್ರಾಮೀಣ ಪರಿಸರದಿಂದ ಬಂದರೂ ದೊಡ್ಡ ಸಾಧನೆ ಮಾಡಿದ್ದಾರೆ. ಕಡುಬಡತನದಲ್ಲಿ ಗೀತಾ ಸವಾಲುಗಳನ್ನು ಸ್ವೀಕರಿಸಿ ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ. ಅವರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸಾಧನೆ ಮಾಡಲಿ. ಈ ನಿಟ್ಟಿನಲ್ಲಿ ಸಂಸ್ಥೆಯು ಎಲ್ಲ ರೀತಿಯ ಸಹಾಯ ನೀಡಲಿದೆ’ ಎಂದು ಕೋರೆ ತಿಳಿಸಿದರು.

ಲಿಂಗರಾಜ ಕಾಲೇಜಿನ ಪ್ರಾಚಾರ್ಯ ಡಾ.ಆರ್.ಎಂ. ಪಾಟೀಲ, ಎಂ.ಆರ್. ಬನಹಟ್ಟಿ, ಪಿಯು ಪ್ರಾಚಾರ್ಯೆ ಗಿರಿಜಾ ಹಿರೇಮಠ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ರಾಮರಾವ್ ಹಾಗೂ ಸಿಬ್ಬಂದಿ ಇದ್ದರು.

ಡಾ.ಮಹೇಶ ಗುರನಗೌಡರ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.