ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದುರ್ಗ | ಅವರಾದಿಯಲ್ಲಿ ಪ್ರಥಮ ಡಿಜಿಟಲ್‌ ಗ್ರಂಥಾಲಯ

Published 27 ಜೂನ್ 2023, 13:58 IST
Last Updated 27 ಜೂನ್ 2023, 13:58 IST
ಅಕ್ಷರ ಗಾತ್ರ

ರಾಮದುರ್ಗ: ಅವರಾದಿಯಲ್ಲಿ ನಿರ್ಮಾಣಗೊಂಡಿರುವ ಡಿಜಿಟಲ್‌ ಗ್ರಂಥಾಲಯಕ್ಕೆ ಬೇಕಾಗುವ ಎಲ್ಲ ಪುಸ್ತಕಗಳನ್ನು ಪೂರೈಕೆ ಮಾಡಲಾಗುವುದು. ಜನ ಓದಿಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.

ಅವರು ತಾಲ್ಲೂಕಿನ ಅವರಾದಿ ಗ್ರಾಮದಲ್ಲಿ ರಾಜೀವ ಗಾಂಧಿ ಸೇವಾ ಕೇಂದ್ರ ಮತ್ತು ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿ, ಹೋದ ಕಡೆಗಳಲ್ಲಿ ಶಾಲು, ಮಾಲೆ ಹಾಕಿ ಸನ್ಮಾನಿಸುತ್ತಾರೆ. ಇದಕ್ಕೆ ನನ್ನ ವಿರೋಧವಿದೆ. ಗೌರವಪೂರ್ವಕ ಪುಸ್ತಕ, ಗ್ರಂಥಗಳನ್ನು ನೀಡಿದರೆ ಅದರಿಂದ ಜನರಿಗೆ ಉಪಯೋಗವಾಗಲಿದೆ ಎಂದು ಹೇಳಿದರು.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಿ.ಎಸ್.ಗುಡದಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾಗುವ ಎಲ್ಲಾ ಪುಸ್ತಕಗಳು ಲಭ್ಯ ಇವೆ. ಅವುಗಳನ್ನು ಓದಿ ಕೆಎಎಸ್, ಐಎಎಸ್ ಒಳ್ಳೆಯ ಹುದ್ದೆಗಳನ್ನು ಹೊಂದಬೇಕು ಎಂದು ತಿಳಿಸಿದರು.

ರಾಮದುರ್ಗ,ಶಿವಪೇಠ ಶಿವಮೂರ್ತೇಶ್ವರ ಮಠದ ಶಾಂತವೀರ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಪುಸ್ತಕ ಜ್ಞಾನ ಬಹಳ ಮುಖ್ಯವಾಗಿದೆ. ಗ್ರಂಥಗಳನ್ನು ಓದಿದರೆ ಇಡೀ ಜಗತ್ತನ್ನೇ ಗೆಲ್ಲಬಹುದು ಎಂದು ಅಭಿಪ್ರಾಯಪಟ್ಟರು.

ಅವರಾದಿ ಫಲಾಹಾರೇಶ್ವರ ಮಠದ ಶಿವಮೂರ್ತಿ ಸ್ವಾಮೀಜಿ ಮಾತನಾಡಿ, ಗ್ರಂಥಾಲಯ ಎಂದರೆ ದೇವಾಲಯವಿದ್ದಂತೆ. ಗ್ರಾಮದಲ್ಲಿನ ದೇವಾಲಯಕ್ಕಿಂತಲೂ ಈ ಗ್ರಂಥಾಲಯವೆಂಬ ದೇವಾಲಯ ಬಹುದೊಡ್ಡದು. ಇದನ್ನು ಅವರಾದಿಯಲ್ಲಿ ಪ್ರಥಮವಾಗಿ ಸ್ಥಾಪನೆ ಮಾಡಿದ್ದು ಹರ್ಷ ತಂದಿದೆ ಎಂದರು.

ಅವರಾದಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ರೋಣದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ರಾಮದುರ್ಗ ತಾಪಂ ಇ.ಒ ಪ್ರವೀಣಕುಮಾರ ಸಾಲಿ, ಶ್ರೀನಿವಾಸ ವಿಶ್ವಕರ್ಯ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರು, ಸರ್ವ ಸದಸ್ಯರು ಮತ್ತು ಸಿಬ್ಬಂದಿ ಹಾಜರಿದ್ದರು. ರಮೇಶ ಮೋಟೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT