ಶನಿವಾರ, ಅಕ್ಟೋಬರ್ 31, 2020
22 °C

‘ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲಸಂಗ: ‘ರೋಗ ಬಂದ ಮೇಲೆ ನರಳುವ ಮುನ್ನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಮತ್ತು ಎಚ್ಚರ ವಹಿಸುವುದು ಇಂದಿನ ಅಗತ್ಯವಾಗಿದೆ’ ಎಂದು ಹೊನವಾಡದ ಬಾಬುರಾವ ಮಹಾರಾಜರು ಹೇಳಿದರು.

ಸಮೀಪದ ಕನ್ನಾಳ ಗ್ರಾಮದಲ್ಲಿ ಆಯುರ್ವೇದ ಔಷಧಿ ಉಚಿತವಾಗಿ ವಿತರಿಸಿ ಅವರು ಮಾತನಾಡಿದರು.

‘ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಸೋಂಕುಗಳಿಂದ ದೂರವಾಗಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕನ್ನಾಳದ ಬಸವಲಿಂಗ ಹಿರೇಮಠ ಸ್ವಾಮೀಜಿ ಮಾತನಾಡಿದರು. ಹಿರಿಯರಾದ ನಾನಾಗೌಡ ಪಾಟೀಲ, ಯಂಕಣ್ಣ ಅಸ್ಕಿ, ಅಪ್ಪಾಸಾಹೇಬ ಇಸರಗೊಂಡ, ಧರೆಪ್ಪ ದಳವಾಯಿ, ಅಶೋಕ ಮರನೂರ, ತಮ್ಮಣ್ಣ ಹಿರೇಕುರಬರ, ಸಿದ್ರಾಮ ದಳವಾಯಿ, ಚಂದ್ರಶೇಖರ ವಳಸಂಗ, ಸಂಗಪ್ಪ ನೇಮಗೌಡ, ಅಲ್ಲಾಭಕ್ಷ
ಮುಲ್ಲಾ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.