ಶುಕ್ರವಾರ, ಆಗಸ್ಟ್ 19, 2022
25 °C

‘ಕ್ಷೇತ್ರದಲ್ಲಿ ಹಿಂದೆ ಅನುದಾನದ ಸದುಪಯೋಗವೇ ಆಗಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಕ್ಷೇತ್ರದಲ್ಲಿ ಈ ಹಿಂದೆ ಅನುದಾನ ಸದುಪಯೋಗವೇ ಆಗಿಲ್ಲ’ ಎಂದು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ದೂರಿದರು.

ಕ್ಷೇತ್ರದ ಹೌಸಿಂಗ್ ಬೋರ್ಡ್‌ ಕಾಲೊನಿಯಲ್ಲಿ ₹ 1.40 ಕೋಟಿ ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಕ್ಷೇತ್ರವನ್ನು ಸುತ್ತು ಹಾಕಿ ಗಮನಿಸಿದರೆ ಈವರೆಗೂ ಏಕೆ ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸಲಿಲ್ಲ ಎನ್ನುವುದೇ ಅರ್ಥವಾಗುತ್ತಿಲ್ಲ. ಸರ್ಕಾರದ ಅನುದಾನವಿರುವಾಗ ಅದನ್ನು ಸದುಪಯೋಗಪಡಿಸಿಕೊಳ್ಳುವ ಪ್ರಯತ್ನವೇ ಆಗಲಿಲ್ಲ. ನಾನು ಶಾಸಕಿಯಾಗಿ ಆಯ್ಕೆಯಾದ ನಂತರ ಯಾವ ಯೋಜನೆಗಳಲ್ಲಿ ಅನುದಾನ ತರಲು ಸಾಧ್ಯವಿದೆಯೇ ಅದ್ಯಾವುದನ್ನೂ ಬಿಡುತ್ತಿಲ್ಲ. ಮೊದಲ ಬಾರಿಗೆ ಶಾಸಕಿಯಾದರೂ ಹಿರಿಯ ಶಾಸಕರು ಕೂಡ ತರದಷ್ಟು ಅನುದಾನವನ್ನು ತಂದಿದ್ದೇನೆ’ ಎಂದರು.

ನಿವಾಸಿಗಳು, ಅವಿನಾಶ್ ಬೆಲ್ಲದ, ಭೂಪಾಲಿ, ಗುತ್ತಿಗೆದಾರರು ಹಾಗೂ ಕಾರ್ಯಕರ್ತರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.