ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗಾಗಿ ರಸ್ತೆಗಿಳಿದ ನಿವಾಸಿಗಳು

15 ದಿನಕ್ಕೊಮ್ಮೆ 15 ನಿಮಿಷ ಮಾತ್ರ ನೀರು ಸರಬರಾಜು: ಜನರ ಆಕ್ರೋಶ
Last Updated 29 ಮೇ 2018, 8:33 IST
ಅಕ್ಷರ ಗಾತ್ರ

ಕಲಬುರ್ಗಿ: ನೀರು ಪೂರೈಕೆಗೆ ಒತ್ತಾಯಿಸಿ ಇಲ್ಲಿಯ ಜಗತ್‌, ಎಸ್‌ಟಿಬಿಟಿ ಹಾಗೂ ಜಿಲ್ಲಾ ಆಸ್ಪತ್ರೆ ಎದುರುಗಡೆಯ ಬಡಾವಣೆಗಳ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

‘ಹಿಂದೆ ನಾಲ್ಕರಿಂದ ಐದು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿತ್ತು. 15 ದಿನಗಳ ನಂತರ ಸೋಮವಾರ ನೀರು ಪೂರೈಸಿದರು. ಕೇವಲ 15 ನಿಮಿಷ ನೀರು ಬಂತು. ಅದು ಸಂಪೂರ್ಣ ಕಲುಷಿತವಾಗಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬೆಳಿಗ್ಗೆ 7.30ರ ಸುಮಾರು ಇಲ್ಲಿಯ ಎಸ್‌ಟಿಬಿಟಿ ಹತ್ತಿರ ಹಾಗೂ ಜಿಲ್ಲಾ ಆಸ್ಪತ್ರೆ ಎದುರಿನ ಸೇಡಂ ರಸ್ತೆಗೆ ಖಾಲಿ ಕೊಡಗಳೊಂದಿಗೆ ನುಗ್ಗಿದ ನಿವಾಸಿಗಳು, ಒಂದು ಗಂಟೆಗೂ ಹೆಚ್ಚುಕಾಲ ಧರಣಿ ನಡೆಸಿದರು.

ಸ್ಥಳಕ್ಕೆ ಆಗಮಿಸಿದ ಜಲಮಂಡಳಿಯ ಸಿಬ್ಬಂದಿ ನೀರು ಪೂರೈಸುವ ಭರವಸೆ ನೀಡಿದರು. ಆ ನಂತರ ಪ್ರತಿಭಟನೆ ಕೈಬಿಡಲಾಯಿತು.

‘ಮಹಾನಗರ ಪಾಲಿಕೆ ಯವರು ನಮ್ಮ ಸಮಸ್ಯೆ ಆಲಿಸುತ್ತಿಲ್ಲ. ಪ್ರತಿಭಟನೆ ನಡೆಸಿದರೂ ಯಾವೊಬ್ಬ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ. ನೀರು ಪೂರೈಸದಿದ್ದರೆ ಮಂಗಳವಾರ ಮತ್ತೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದವರು ಹೇಳಿದರು.

ಸಹಾಯಕ್ಕೆ ಅಧಿಕಾರಿಗಳು

ಕಲಬುರ್ಗಿ: ನಗರದ ವಾರ್ಡುಗಳಲ್ಲಿ ಯಾವುದೇ ರೀತಿಯ ನೀರು ಸರಬರಾಜಿನ ತೊಂದರೆ ಹಾಗೂ ಕೊಳವೆಬಾವಿ ಪಂಪ್‌ಗಳ ದುರಸ್ತಿಗಾಗಿ ವಾರ್ಡ್‌ವಾರು ಶಾಖಾಧಿಕಾರಿಗಳನ್ನು ನೇಮಿಸಲಾಗಿದೆ.ಇವರನ್ನು ಸಂಪರ್ಕಿಸಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಲಬುರ್ಗಿ ಸಹಾಯಕ ಕಾರ್ಯಪಾಲಕ ಎಂಜಿನಿಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ಡ ಸಂಖ್ಯೆ ಮತ್ತು ಶಾಖಾಧಿಕಾರಿಗಳ ಹೆಸರು ಮತ್ತು ಮೊಬೈಲ್ ಸಂಖ್ಯೆಗಳ ವಿವರ ಇಂತಿದೆ: ವಾರ್ಡ್‌ 29(ಪಿ), 30, 42, 44(ಪಿ), 45(ಪಿ), 46,47,48(ಪಿ)– ಸಹಾಯಕ ಎಂಜಿನಿಯರ್ ರವೀಂದ್ರ ಪಾಟೀಲ (ಮೊ.9448147069).

ವಾರ್ಡ ಸಂಖ್ಯೆ 10(ಭಾಗ), 27(ಭಾಗ), 28, 29, 12, 13, 14, 15(ಭಾಗ), 2(ಭಾಗ) 4, 5, 9, 10 (ಭಾಗ), 15(ಭಾಗ), 16 (ಭಾಗ), 32 (ಭಾಗ), 38(ಪಿ), 48(ಪಿ), 50, 53, 54 ಮತ್ತು 55– ಸಹಾಯಕ ಎಂಜಿನಿಯರ್ ಅಬ್ದುಲ್ ಬಾಸೀತ್ (ಮೊ. 9480689519).

ವಾರ್ಡ್‌ ಸಂಖ್ಯೆ 16(ಪಿ), 17(ಪಿ), 24, 25, 26, 27(ಪಿ), 31, 43, 44 ಮತ್ತು 45(ಪಿ)– ಕಿರಿಯ ಎಂಜಿನಿಯರ್ ಉಮೇಶ ಎಂ. ಪಂಚಾಳ (ಮೊ. 9480689519).

ವಾರ್ಡ್‌ ಸಂಖ್ಯೆ 1,3,6,7,8,16(ಪಿ), 17(ಪಿ), 18, 19,22, 23 ಮತ್ತು 32(ಪಿ)– ಕಿರಿಯ ಎಂಜಿನಿಯರ್ ಕೆ.ಎಂ. ಜೋಶಿ (ಮೊ. 9480689518).

ವಾರ್ಡ್‌ ಸಂಖ್ಯೆ 20, 21, 33, 34, 35, 36, 37, 38, 39 (ಭಾಗ) ಮತ್ತು 40– ಕಿರಿಯ ಎಂಜಿನಿಯರ್ ಆರ್.ಜೆ. ಡಿಸೋಜಾ (ಮೊ.7019143725).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT