ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಿಂಗ ತಾರತಮ್ಯ ಸಲ್ಲದು‘

Last Updated 16 ಮಾರ್ಚ್ 2022, 16:10 IST
ಅಕ್ಷರ ಗಾತ್ರ

ಅಥಣಿ: ‘ಲಿಂಗ ತಾರತಮ್ಯ ಮಾಡದೆ ಸಮಾನವಾಗಿ ಕಂಡಾಗ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ‘ ಎಂದು ಬಣಜವಾಡ ಪಿಯು ಕಾಲೇಜಿನ ಉಪನ್ಯಾಸಕಿ ಡಾ.ರಾಗಿಣಿ ಬಿ. ಪಾಟೀಲ ಹೇಳಿದರು.

ಇಲ್ಲಿನ ಸ್ವಾಮಿ ವಿವೇಕಾನಂದ ವಿದ್ಯಾವಿಕಾಸ ಸಂಸ್ಥೆಯಲ್ಲಿ ಭಾರತೀಯ ಜೈನ ಸಂಘಟನೆ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ತಂತ್ರಜ್ಞಾನ ಬೆಳೆದಂತೆ ಇಂದಿನ ಮಹಿಳೆಯರು ಶಿಕ್ಷಣ ಪಡೆದು ಅನೇಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ, ಹಕ್ಕುಗಳನ್ನು ಪಡೆಯಲು ಹೋರಾಟ ಅನಿವಾರ್ಯವಾಗಿದೆ’ ಎಂದರು.

ಜಾಧವಜಿ ಪ.ಪೂ. ಕಾಲೇಜಿನ ಉಪನ್ಯಾಸಕಿ ಡಾ.ಪ್ರಿಯಂವದಾ ಹುಲಗಬಾಳಿ, ಅಧ್ಯಕ್ಷತೆ ವಹಿಸಿದ್ದ ಭಾರತೀಯ ಜೈನ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಡಿ. ಮೇಕನಮರಡಿ ಮತ್ತು ಭಾರತೀಯ ಜೈನ ಸಂಘಟನೆಯ ಜಿಲ್ಲಾ ಸಂಚಾಲಕ ಅರುಣ ಯಲಗುದ್ರಿ ಮಾತನಾಡಿದರು.

ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಅಭಿನಂದನ ಪಡನಾಡ, ನಿತಿನ ಗೊಂಗಡಿ, ಸುನಂದಾ ಪಡನಾಡ, ಜಯಶ್ರೀ ಕಿನಗಿ, ಲಲಿತಾ ಮೇಕನಮರಡಿ, ಗುಂಡು ಇಜಾರಿ, ಪದ್ಮರಾಜ ಮುಧೋಳ, ಜಯಂತ ಉಪಾಧ್ಯ, ಭರತೇಶ ಶಿರಹಟ್ಟಿ, ಸಂತೋಷ್ ಬೊಮ್ಮಣ್ಣವರ ಉಪಸ್ಥಿತರಿದ್ದರು.

ಅರುಣಾ ಬಿ. ಅಸ್ಕಿ ಸ್ವಾಗತಿಸಿದರು. ಸುನಂದಾ ಪಾಟೀಲ ನಿರೂಪಿಸಿದರು. ಪ್ರತಿಭಾ ಓಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT