ಗೋಕಾಕ (ಬೆಳಗಾವಿ ಜಿಲ್ಲೆ): ‘ಆಶಾಕಿರಣ ಕಲಾ ಟ್ರಸ್ಟ್ ವತಿಯಿಂದ ನಾಡಿನ ವೃತ್ತಿ ರಂಗಭೂಮಿ ಹಿರಿಯ ಕಲಾವಿದರಾಗಿದ್ದ ದಿವಂಗತ ಬಿ.ಆರ್. ಅರಶಿನಗೋಡಿ ಹಾಗೂ ದಿವಂಗತ ಬಸವಣ್ಣೆಪ್ಪ ಹೊಸಮನಿ ಅವರ ರಂಗ ಸ್ಮರಣೋತ್ಸವ ನಿಮಿತ್ತ ಉಪನ್ಯಾಸ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜುಲೈ 17ರಂದು ಬೆಳಿಗ್ಗೆ 11ಕ್ಕೆ ನಗರದ ಆಧ್ಯಾತ್ಮ ಜ್ಞಾನಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಟ್ರಸ್ಟ್ ಅಧ್ಯಕ್ಷೆ ಮಾಲತಿಶ್ರೀ ಮೈಸೂರು ತಿಳಿಸಿದ್ದಾರೆ.

‘ದಿವಂಗತ ಬಿ.ಆರ್. ಅರಿಶಿನಗೋಡಿ ರಂಗ ಪ್ರಶಸ್ತಿ’ಯನ್ನು ಗಂಗಾವತಿಯ ಹಗಲುವೇಷ ರಂಗ ಕಲಾವಿದ ವಿಭೂತಿ ಗುಂಡಪ್ಪ ಹಾಗೂ ‘ದಿವಂಗತ ಬಸವಣ್ಣಪ್ಪ ಹೊಸಮನಿ ರಂಗ ಪ್ರಶಸ್ತಿ’ಯನ್ನು ಅರಭಾಂವಿಯ ಸಣ್ಣಾಟ ಕಲಾವಿದೆ ಲಕ್ಷ್ಮಿ ಹರಿಜನ ಅವರಿಗೆ ನೀಡಲಾಗುವುದು. ಶೂನ್ಯ ಸಂಪಾದನಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಉದ್ಘಾಟಿಸುವರು. ಚಲನಚಿತ್ರ ನಟ ಮತ್ತು ಗಾಯಕ ಗುರುರಾಜ ಹೋಸಕೋಟಿ ಪ್ರಶಸ್ತಿ ಪ್ರದಾನ ಮಾಡುವರು. ಮುಖಂಡ ಅಶೋಕ ಪೂಜಾರಿ ಅಧ್ಯಕ್ಷತೆ ವಹಿಸುವರು’.

‘ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಹಾಂತೇಶ ತಾಂವಶಿ, ಸಾಹಿತಿ ಪ್ರೊ.ಚಂದ್ರಶೇಖರ ಅಕ್ಕಿ, ಮುಖಂಡ ಸಿದ್ಲಿಂಗಪ್ಪ ದಳವಾಯಿ, ಸಿದ್ದಾರೂಢ ಮಠದ ಧರ್ಮದರ್ಶಿ ಶಾಮಾನಂದ ಪೂಜಾರಿ, ಕಿರುತೆರೆ ನಟಿ ವೀಣಾ ಕಟ್ಟಿ, ಸಿರಿಗನ್ನಡ ಮಹಿಳಾ ವೇದಿಕೆ ಅಧ್ಯಕ್ಷೆ ರಜನಿ ಜೀರಗ್ಯಾಳ, ಚಿತ್ರ ಕಲಾವಿದ ಎಸ್.ಪಾಟೀಲ ಆಗಮಿಸಲಿದ್ದಾರೆ. ಸಾಹಿತಿ ಭಾರತಿ ಮದಭಾಂವಿ ಮತ್ತು ಪ್ರಾಚಾರ್ಯ ಜಯಾನಂದ ಮಾದರ ಉಪನ್ಯಾಸ ನೀಡಲಿದ್ದಾರೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.