ಭಾನುವಾರ, ಮೇ 22, 2022
21 °C

ಬೆಳಗಾವಿ-ಜೋಧಪುರ ವಿಮಾನ: ಮುಂಗಡ ಟಿಕೆಟ್‌ಗಳು ಸಂಪೂರ್ಣ ಮಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಸಂಜಯ್‌ ಘೋಡಾವತ್‌ ಸಮೂಹದ ವಿಮಾನ ಸೇವೆ ವಿಭಾಗವಾದ ಸ್ಟಾರ್ ಏರ್‌ ಜೋಧಪುರ-ಬೆಳಗಾವಿ ವಿಮಾನ ಕಾರ್ಯಾಚರಣೆಯನ್ನು ಫೆ. 16ರಿಂದ ಆರಂಭಿಸಲಿದೆ.

‘ಈ ವಿಮಾನಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮಾರ್ಗದಲ್ಲಿ ವಿಮಾನ ಘೋಷಿಸಿದಾಗಿನಿಂದಲೂ ಮಾಹಿತಿ ಕೋರಿ ಬಹಳ ಕರೆಗಳು ಬರುತ್ತಿವೆ. ಶೇ 100ರಷ್ಟು ಮುಂಗಡ ಬುಕಿಂಗ್‌ ಆಗಿದೆ’ ಎಂದು ಸಮೂಹದ ಅಧ್ಯಕ್ಷ ಸಂಜಯ್ ಘೋಡಾವತ್‌ ತಿಳಿಸಿದ್ದಾರೆ.

‘ಇಲ್ಲಿಂದ ಜೋಧಪುರ ತಲುಪಲು 1,440 ಕಿ.ಮೀ. ದೂರವನ್ನು 25 ಗಂಟೆ ಸಂಚರಿಸಬೇಕಿತ್ತು. ಜೋಧ್‌ಪುರ ಮತ್ತು ಬೆಳಗಾವಿ ಮಧ್ಯೆ ತಡೆರಹಿತ ವಿಮಾನ  ಕಾರ್ಯಾಚರಣೆಯು ಪ್ರಾದೇಶಿಕ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ಮಾರ್ಗದಲ್ಲಿ ಯಾವುದೇ ಇತರ ವಿಮಾನಯಾನ ಸಂಸ್ಥೆಯು ಸೇವೆ ಒದಗಿಸುತ್ತಿಲ್ಲ’ ಎಂದು ಹೇಳಿದ್ದಾರೆ.

‘ಆರ್‌ಸಿಎಸ್‌-ಉಡಾನ್ ಅಡಿ 2ನೇ ಮತ್ತು 3ನೇ ಹಂತದ ನಗರಗಳನ್ನು ಸಂಪರ್ಕಿಸಲು ನಮಗೆ ಹೆಮ್ಮೆಯಾಗುತ್ತದೆ. ಇದು ಗ್ರಾಮೀಣ ಭಾರತವನ್ನು ಸಂಪರ್ಕಿಸುವ ನಮ್ಮ ನಿಜವಾದ ಧ್ಯೇಯವನ್ನು ಪ್ರತಿಫಲಿಸುತ್ತದೆ. ಅಜ್ಮೇರ್ (ಕೃಷ್ಣಗಢ) ಮಾರ್ಗಕ್ಕೆ ಸ್ವೀಕರಿಸಿದ ಅಪಾರ ಪ್ರತಿಕ್ರಿಯೆಯು, ಇತರ ನಗರಗಳಿಗೆ ಸಂಪರ್ಕಿಸಲು ಪ್ರೋತ್ಸಾಹಿಸಿದೆ. ಜೋಧಪುರ ಮಾರ್ಗವು ಈ ನಿಟ್ಟಿನಲ್ಲಿ ಒಂದು ಮಹತ್ವದ್ದಾಗಿದೆ. ಉಡಾನ್ ಯೋಜನೆಯಲ್ಲಿ ಕಾರ್ಯನಿರ್ವಹಿಸುವುದರಿಂದ ಇದು ಅತ್ಯಂತ ಕೈಗೆಟಕುವ ಬೆಲೆಯಲ್ಲಿದೆ. ಕೇವಲ 2 ಗಂಟೆಗಳಲ್ಲಿ ಇಲ್ಲಿಂದ ಜೋಧಪುರಕ್ಕೆ ತಲುಪಬಹುದು’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು