ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದ, ಸೋತ ಕುಟುಂಬಗಳ ಮಹಿಳೆಯರ ಬೀದಿ ಕಾಳಗ

ಗ್ರಾಮ ಪಂಚಾಯ್ತಿ ಚುನಾವಣೆ
Last Updated 5 ಜನವರಿ 2021, 9:33 IST
ಅಕ್ಷರ ಗಾತ್ರ

ಮೂಡಲಗಿ: ಮೂಡಲಗಿ ತಾಲ್ಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಸೋತ ಹಾಗೂ ಗೆದ್ದ ಅಭ್ಯರ್ಥಿಗಳ ಕುಟುಂಬಸ್ಥರ ಮಹಿಳೆಯರು ದೊಣ್ಣೆಗಳಿಂದ ಬಡಿದಾಡಿಕೊಂಡು, ಪರಸ್ಪರ ಕಲ್ಲು ತೂರಾಡಿ ಹೊಡೆದಾಡಿಕೊಂಡ ಘಟನೆಯ ವಿಡಿಯೊ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ತುಕ್ಕಾನಟ್ಟಿ ಗ್ರಾಮದ 4ನೇ ವಾರ್ಡ್‌ನಲ್ಲಿ ಇಬ್ಬರು ಮಹಿಳೆಯರು ಸ್ಪರ್ಧಿಸಿದ್ದು, ಅದರಲ್ಲಿ ಸುನಂದಾ ಯಮನಪ್ಪ ಭಜಂತ್ರಿ ಗೆಲುವು ಸಾಧಿಸಿದ್ದರು. ಸುರೇಖಾ ಭೀಮಶಿ ಕಂಕಣವಾಡಿ ಎಂಬುವವರು ಸೋತಿದ್ದರು. ಗ್ರಾಮದ 2ನೇ ವಾರ್ಡ್‌ನಲ್ಲಿ ಈ ಎರಡೂ ಕುಟುಂಬಸ್ಥರು ಒಂದೇ ಬೀದಿಯಲ್ಲಿ ಇರುವುದಿಂದ ಸೋತ ಅಭ್ಯರ್ಥಿಯ ಕುಟುಂಬಸ್ಥರು ಕುಡಿಯುವ ನೀರು ಬರದಂತೆ ನಲ್ಲಿ ಬಂದ್ ಮಾಡಿದ್ದಾರೆ ಎಂದು ಗೆದ್ದ ಅಭ್ಯರ್ಥಿ ಸುನಂದಾ ಕುಟುಂಬಸ್ಥರು ಆರೋಪಿಸಿದ್ದರು. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ.

ಗೆದ್ದ ಅಭ್ಯರ್ಥಿ ಸುನಂದಾ ಕುಟುಂಬಸ್ಥರ ಮೇಲೆ ಸೋತ ಅಭ್ಯರ್ಥಿಯ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ. ಶನಿವಾರ ಸಂಜೆ ಈ ಘಟನೆ ನಡೆದಿದ್ದು ಘಟಪ್ರಭಾ ಪೊಲೀಸರು ಬಂದು ಪರಿಸ್ಥಿತಿ ಶಾಂತಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT