ಬೆಳಗಾವಿ: ಹೆಸರು ಇಲ್ಲದಂತಾದ ಕಾಳು!

ಬೈಲಹೊಂಗಲ: ಸಾವಿರಾರು ಎಕರೆ ಭೂಮಿಯಲ್ಲಿ ಎದೆ ಎತ್ತರಕ್ಕೆ ಬೆಳೆದಿದ್ದ ಹೆಸರು ಕಾಳು ಬೆಳೆ ಸತತ ಮಳೆಯಿಂದಾಗಿ ಈ ಬಾರಿಯೂ ನೀರು ಪಾಲಾಗಿದೆ.
ದೊಡವಾಡ, ಉಡಿಕೇರಿ, ಮಲ್ಲಮ್ಮನ ಬೆಳವಡಿ ಸೇರಿದಂತೆ ಸುತ್ತಲಿನ ಗ್ರಾಮಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಕಾಳು ಬೆಳೆಯುವ ಗ್ರಾಮ ಎಂಬ ಖ್ಯಾತಿ ಹೊಂದಿವೆ. ಈ ಬಾರಿ ದಾಖಲೆ ಪ್ರಮಾಣದಲ್ಲಿ ಹೆಸರು ಬರುವ ನಿರೀಕ್ಷೆ ಇತ್ತು. ಆದರೆ ರೈತರ ಕನಸು ಮಳೆ ನೀರಿನಲ್ಲೆ ಕೊಚ್ಚಿ ಹೋಗಿದೆ. ಜಮೀನುಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆ ನೀರು ಸಂಗ್ರಹವಾಗಿದೆ. ಇದರಿಂದ ಹೆಸರು ಕಾಳು ಮಾತ್ರವಲ್ಲದೇ ಹುರಳಿ, ಹತ್ತಿ, ಸೋಯಾಅವರೆಯೂ ಹಾಳಾಗುತ್ತಿದೆ.
‘ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿದೆ. ಪದೇ, ಪದೇ ಬೆಳೆ ಹಾನಿ ಆಗುತ್ತಿದ್ದರೆ ಒಕ್ಕಲುತನ ಹೇಗೆ ಮುಂದುವರಿಸಬೇಕು? ಹಾನಿ ಅನುಭವಿಸಿದ ಎಲ್ಲ ರೈತರಿಗೆ ತುರ್ತು ಪರಿಹಾರ ನೀಡಬೇಕು’ ಎಂದು ಹೊಸೂರಿನ ರೈತ ಎಫ್.ಎಸ್.ಸಿದ್ಧನಗೌಡರ ಆಗ್ರಹಿಸುತ್ತಾರೆ.
***
ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿದೆ. ಪದೇ, ಪದೇ ಬೆಳೆ ಹಾನಿ ಆಗುತ್ತಿದ್ದರೆ ಒಕ್ಕಲುತನ ಹೇಗೆ ಮುಂದುವರಿಸಬೇಕು? ಹಾನಿ ಅನುಭವಿಸಿದ ಎಲ್ಲ ರೈತರಿಗೆ ತುರ್ತು ಪರಿಹಾರ ನೀಡಬೇಕು
-ಎಫ್.ಎಸ್.ಸಿದ್ಧನಗೌಡರ, ರೈತ, ಹೊಸೂರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.