ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಸ್‌ನಲ್ಲಿ ಹಸಿರು ಉಪಕ್ರಮ; ಸೈಕಲ್ ಬಳಕೆ

Last Updated 5 ನವೆಂಬರ್ 2020, 13:04 IST
ಅಕ್ಷರ ಗಾತ್ರ

ಬೆಳಗಾವಿ: ಹತ್ತರಗಿ ಸಮೀಪದಲ್ಲಿರುವ ಏಕಸ್ ಕಂಪನಿಯು ತನ್ನ ಕ್ಯಾಂಪಸ್‌ನಲ್ಲಿ ಸೈಕಲ್ ಬಳಸುವ ‘ಸೈಕಲ್ ದಿ ಕ್ಯಾಂಪಸ್’ ಉಪಕ್ರಮಕ್ಕೆ ಚಾಲನೆ ನೀಡಿದೆ.

ಏಕಸ್‌ ಏರೊಸ್ಪೇಸ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ರಾಜೀವ್ ಕೌಲ್ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.

ಬಳಿಕ ಮಾತನಾಡಿದ ಅವರು, ‘ಉದ್ಯೋಗಿಗಳಿಗೆ ಕ್ಯಾಂಪಸ್ ಒಳಗೆ ಪರಿಸರ ಸ್ನೇಹಿ ರೂಢಿಗಳನ್ನು ಉತ್ತೇಜಿಸುವುದು ಮತ್ತು ಸುಸ್ಥಿರ ಗುರಿಗಳತ್ತ ನಮ್ಮ ಗಮನ ಸದೃಢಗೊಳಿಸುವ ಉದ್ದೇಶವನ್ನು ಈ ಉಪಕ್ರಮದ ಮೂಲಕ ಹೊಂದಲಾಗಿದೆ. ನಮ್ಮ ಕಾರ್ಯಾಚರಣೆಗಳ ಪ್ರತಿ ಆಯಾಮದಲ್ಲೂ ಪರಿಸರ ಕುರಿತು ಸಂವೇದನೆಯೊಂದಿಗೆ ತೊಡಗಿಸಿಕೊಳ್ಳುವ ಪ್ರಯತ್ನಗಳನ್ನು ಪ್ರತಿಫಲಿಸುತ್ತದೆ’ ಎಂದು ತಿಳಿಸಿದರು.

‘ಆಧುನಿಕತೆಯಿಂದ ಕಲುಷಿತವಾಗದ ಕ್ಯಾಂಪಸ್‌ ಸಂರಕ್ಷಿಸುವುದು, ನಮ್ಮ ಉದ್ಯೋಗಿಗಳಲ್ಲಿ ಆರೋಗ್ಯಕರ ಜೀವನಶೈಲಿ ಪ್ರೇರೇಪಿಸುವುದು ಉದ್ದೇಶವಾಗಿದೆ’ ಎಂದು ತಿಳಿಸಿದರು.

‘ಉದ್ಯೋಗಿಗಳು ಹಸಿರಿನ ಕ್ಯಾಂಪಸ್‌ನಲ್ಲಿ ಈ ಸೈಕಲ್‌ಗಳಲ್ಲಿ ಸಂಚರಿಸಬಹುದು. ಅವುಗಳಿಗೆ ಜಿಪಿಎಸ್ ಅಳವಡಿಸಲಾಗಿದೆ ಮತ್ತು ಪೂರ್ಣ ಸ್ವಯಂಚಾಲಿತ ಸ್ಮಾರ್ಟ್ ಮೆಕ್ಯಾನಿಸಂ ಹೊಂದಿದ್ದು, ಆ್ಯಪ್‌ ಮೂಲಕ ಅನ್‌ಲಾಕ್ ಮಾಡಬಹುದು. ಪ್ರಮುಖ ಜಂಕ್ಷನ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಆ್ಯಪ್‌ನಲ್ಲಿ ದೊರೆಯುವ ಕ್ಯೂಆರ್ ಕೋಡ್ ಬಳಸಿ ಬಳಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT