ಕಾಗವಾಡ: ತಾಲ್ಲೂಕಿನ ಉಗಾರ ಬುದ್ರುಕ ಗ್ರಾಮದ ವಾರ್ಡ್ ನಂ.7ರಲ್ಲಿ ಪದ್ಮಶ್ರೀ ಕಾಲೊನಿಯಲ್ಲಿರುವ ಮಹೆಬೂಬ ಸುಬಾನಿ ದರ್ಗಾದ ಪಕ್ಕದಲ್ಲಿ ಹಿಂದೂ– ಮುಸ್ಲಿಂ ಯುವಕರು ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಭಾವೈಕ್ಯ, ಸಾಮರಸ್ಯದ ಸಂದೇ ಸಾರಿದ್ದಾರೆ.
ಇಲ್ಲಿನ ಸುಮಾರು 30ಕ್ಕೂ ಹೆಚ್ಚು ಮುಸ್ಲಿಂ ಯುವಕರು ಹಾಗೂ 20ಕ್ಕೂ ಹೆಚ್ಚು ಹಿಂದೂ ಯುವಕರು ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಿದರು.
ಕಳೆದ 6 ವರ್ಷಗಳಿಂದ ಈ ರೀತಿಯ ಗಣೇಶೋತ್ಸವ ಆಚರಿಸುತ್ತಿದ್ದು ತಮ್ಮ ಗಣೇಶ ಮಂಡಳಿಗೆ ಹಿಂದೂ-ಮುಸ್ಲಿಂ ಮಂಡಳಿ ಎಂದು ಹೆಸರು ಇಟ್ಟಿದ್ದಾರೆ. ಮಂಡಳಿಯಲ್ಲಿ ಎರಡು ಸಮಾಜದ ಸದಸ್ಯರಿದ್ದಾರೆ. ಅದರಂತೆ ಗಲ್ಲಿಯ ಹಿಂದೂ ಹಾಗೂ ಮುಸ್ಲಿಂ ಯುವಕರು ದರ್ಗಾ ಪಕ್ಕದಲ್ಲಿ ಪ್ರತಿ ವರ್ಷ ಮಂಟಪ ನಿರ್ಮಾಣ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.
ಹಿಂದೂ-ಮುಸ್ಲಿಂ ಗಣೇಶೋತ್ಸವ ಮಂಡಳಿ ಸದಸ್ಯರಾದ ಮಾರುತಿ ಕೋಳಿ, ಅಪ್ಪಾಸಾಬ ನದಾಫ, ಉಮೇಶ ಕೋಳಿ, ಅಸ್ಲಂ ಮಾಂಜರೆ, ಸುಶಾಂತ ವಿರೋಜೆ, ಸುಭಾನ ಢಲಾಯತ್, ರಾಕೇಶ ಕೋಳಿ, ಜಾವೇದ ಮಾಂಜರೆ ಸೇರಿದಂತೆ ಹಲವು ಹಿಂದೂ– ಮುಸ್ಲಿಂ ಯುವಕರು ಭಾವೈಕ್ಯದಿಂದ ಗಣೇಶೋತ್ಸವ ಆಚರಿಸುತ್ತಿರುವುದು ವಿಶೇಷವಾಗಿದೆ.