ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯರ ಹಿತಕಾಪಾಡುವಲ್ಲಿ ಕಾಂಗ್ರೆಸ್ ನಿರತ: ಸಚಿವ ಸತೀಶ್

Published 30 ಮಾರ್ಚ್ 2024, 16:16 IST
Last Updated 30 ಮಾರ್ಚ್ 2024, 16:16 IST
ಅಕ್ಷರ ಗಾತ್ರ

ಹುಕ್ಕೇರಿ: ಕಾಂಗ್ರೆಸ್ ಪಕ್ಷವು  ಬಡವರ, ದೀನದಲಿತರ ಮತ್ತು ರೈತರ ಪರವಿದ್ದು, ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಮಹಿಳಾ ಸಬಲೀಕರಣ ಮಾಡುವ ಜತೆಗೆ ಸಾಮಾನ್ಯರ ಹಿತಕಾಪಾಡುವಲ್ಲಿ ಯಶಸ್ಸು ಕಂಡಿದೆ ಎಂದು ಜಿಲ್ಲಾ ಉಸ್ತವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ತಾಲ್ಲೂಕಿನ ಘೋಡಗೇರಿ ಗ್ರಾಮದ ಶಿವಾನಂದ ಮಠ, ವಿರಕ್ತಮಠ ಮತ್ತು ಗಜಲಿಂಗೇಶ್ವರ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿದ ಬಳಿಕ ಮಾತನಾಡಿದರು.

ಘೋಡಗೇರಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸುತ್ತಾಡಿದಾಗ, ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರ ಪರ ವಾತಾವರಣವಿದ್ದು, ಸಂಪೂರ್ಣ ಬೆಂಬಲ ಸಿಗುವ ಆಶಯ ವ್ಯಕ್ತಪಡಿಸಿದರು.

ಭೇಟಿ: ಘೋಡಗೇರಿ ಗ್ರಾಮದ ಶಿವಾನಂದ ಮಠ, ವಿರಕ್ತಮಠ ಮತ್ತು ಗಜಲಿಂಗೇಶ್ವರ ದೇವಸ್ಥಾನ, ದರ್ಗಾಕ್ಕೆ ಜಾರಕಿಹೊಳಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ ಮಠದಲ್ಲಿ ಅವರನ್ನು ಸತ್ಕರಿಸಿ ಆಶೀರ್ವದಿಸಿದರು.

ಮಾಜಿ ಸಚಿವ ಶಶಿಕಾಂತ ನಾಯಿಕ, ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗದ ಬಸವರಾಜ ಮಟಗಾರ್, ಮುಖಂಡರಾದ ದುಂಡನಗೌಡ ಪಾಟೀಲ್, ಅಶೋಕ ಅಂಕಲಗಿ, ಪಿಕೆಪಿಎಸ್ ಅಧ್ಯಕ್ಷ ಬಾಬು ಅಂಕಲಗಿ, ಶ್ರೀಕಾಂತ ಭೂಷಿ, ವಿಶಾಲ ಪೂಜಾರಿ, ಭಕ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT