ಖಾನಾಪುರ: ತಾಲ್ಲೂಕಿನ ಶೇಡೇಗಾಳಿ, ಹರೂರಿ, ರೂಮೇವಾಡಿ ಗ್ರಾಮಗಳ ಹೊರವಲಯದ ನದಿ ಮತ್ತು ಹಳ್ಳಗಳಿಂದ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ. ದಡಗಳಲ್ಲಿ ಫಿಲ್ಟರ್ಗಳನ್ನು ಅಳವಡಿಸಿರುವ ದುಷ್ಕರ್ಮಿಗಳು, ತಡರಾತ್ರಿಯ ನಂತರ ವಾಹನಗಳಲ್ಲಿ ಮರಳು ಸಾಗಣೆ ಮಾಡುವುದು ಪತ್ತೆಯಾಗಿದೆ.

ಶೇಡೇಗಾಳಿ ಗ್ರಾಮದ ಹೊರವಲಯದ ತೋಟಗಾರಿಕಾ ಕ್ಷೇತ್ರದ ಬಳಿ ಇರುವ ಅರಣ್ಯ ಪ್ರದೇಶ ಮತ್ತು ಅಕ್ಕಪಕ್ಕದ ಜಮೀನುಗಳಲ್ಲಿ ಬೋಟ್ ಬಳಸಿ ಮರಳು ಸಂಗ್ರಹಿಸಲಾಗಿದೆ. ಮಲಪ್ರಭಾ ನದಿ ಮತ್ತು ಅಲಾತ್ರಿ ಹಳ್ಳಗಳ ಅಕ್ಕಪಕ್ಕದ ಪ್ರದೇಶದಲ್ಲಿ ಅವ್ಯಾಹತ ಮರಳುಗಾರಿಕೆಯಿಂದ ದೊಡ್ಡ ಕಂದಕಗಳು ನಿರ್ಮಾಣವಾಗಿವೆ.

‘ಟಿಪ್ಪರ್, ಟ್ರ್ಯಾಕ್ಟರ್ಗಳಲ್ಲಿ ಬೇಕಾಬಿಟ್ಟಿಯಾಗಿ ಮರಳು ಸಾಗಣೆ ಮಾಡುವುದರಿಂದ ರಸ್ತೆಗಳೂ ಹಾಳಾಗಿವೆ. ಇದನ್ನು ಅರಣ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ನಿಯಂತ್ರಿಸುತ್ತಿಲ್ಲ. ಇದರ ಬಗ್ಗೆ ದೂರು ನೀಡಿದರೆ, ಕೃಷಿ ಭೂಮಿಯಿಂದ ಮರಳು ತೆಗೆಯುವುದನ್ನು ತಡೆಯುವುದು ತಮ್ಮ ವ್ಯಾಪ್ತಿಯಲ್ಲಿ ಇಲ್ಲವೆಂದು ಪೊಲೀಸರು ಹೇಳುತ್ತಾರೆ’ ಎಂದು ಗ್ರಾಮಸ್ಥರು ತಿಳಿಸಿದರು.

‘ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದವರು ಅರಣ್ಯ ಪ್ರದೇಶದ ಇಕ್ಕಟ್ಟಾದ ರಸ್ತೆಯಲ್ಲಿ ಭಾರೀ ವಾಹನಗಳನ್ನು ಸಾಗಿಸುತ್ತಾರೆ. ರಸ್ತೆಯನ್ನು ಹಾಳು ಮಾಡುತ್ತಾರೆ. ಹೊಲಗಳಿಗೆ ಹೋಗುವುದು ಕಷ್ಟವಾಗಿದೆ. ಯಾರೂ ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಜಿಲ್ಲಾಧಿಕಾರಿ, ಅರಣ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ’ ಎಂದು ಮಂತುರ್ಗಾ, ಹರೂರಿ, ಶೇಡೆಗಾಳಿ ಗ್ರಾಮಸ್ಥರು ತಿಳಿಸಿದರು.

‘ಮರಳು ತುಂಬಿದ ವಾಹನಗಳು ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಮಧ್ಯರಾತ್ರಿ 12ರಿಂದ ನಸುಕಿನ ಜಾವದ 5ರವರೆಗೆ ಸಾಗುತ್ತವೆ. ಕೆಲ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದಾರೆ. ಕಮಿಷನ್ ಪಡೆದು ಮರಳು ಸಾಗಣೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ’ ಎಂದು ಮರಳು ಮಾರುವ ದಲ್ಲಾಳಿಗಳು ಹೇಳಿದರು.

ನಿರಂತರ ಮರಳು ಎತ್ತುತ್ತಿರುವ ಕಾರಣ ಮಲಪ್ರಭಾ ಪಾಂಡರಿ ಹಳ್ಳ ಮತ್ತು ಅಲಾತ್ರಿ ಹಳ್ಳದ ಪ್ರದೇಶಗಳಲ್ಲಿ ಕಾಡಿನ ಪ್ರಾಣಿ– ಪಕ್ಷಿಗಳಗೆ ಸಂಕಷ್ಟ ಎದುರಾಗಿದೆ
ಜ್ಯೋತಿಬಾ ಸಾಮಾಜಿಕ ಕಾರ್ಯಕರ್ತ

ಮರಳು ಅಕ್ರಮಕ್ಕೆ ಕಡಿವಾಣ ಹಾಕಬೇಕಾದವರು ರಾಜಕೀಯ ಒತ್ತಡಕ್ಕೆ ಮಣಿದು ಸುಮ್ಮನಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಸರ್ಪಗಾವಲು ಹಾಕುವ ಮೂಲಕ ಈ ದಂಧೆಗೆ ಕಡಿವಾಣ ಹಾಕಬೇಕು ಮಹಾಂತೇಶ.
ಗ್ರಾಮಸ್ಥ ನಂದಗಡ

ಮಂತುರ್ಗಾ ಭಾಗದಲ್ಲಿ ಮರಳುಗಾರಿಕೆ ನಡೆದಿರುವ ಸಂಗತಿ ನನ್ನ ಗಮನಕ್ಕೆ ಬಂದಿಲ್ಲ. ಕಂದಾಯ ನಿರೀಕ್ಷಕರ ಮೂಲಕ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು
ದುಂಡಪ್ಪ ಕೋಮಾರ ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.