ಕಾಗವಾಡ: ‘ರಾಜ್ಯ ಸರ್ಕಾರ ಬಸ್ ಟಿಕೆಟ್ ದರ ಶೇ 15 ಏರಿಕೆ ಮಾಡಿದ್ದು ಸರಿಯಿದೆ. ಕೆಲ ವರ್ಷಗಳ ಹಿಂದೆಯೇ ಟಿಕೆಟ್ ದರ ಏರಿಕೆಯಾಗಬೇಕಿತ್ತು. ಈಗ ಏರಿಕೆಯಾಗಿದೆ‘ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ರಾಜು ಕಾಗೆ ಹೇಳಿದರು.

ತಾಲ್ಲೂಕಿನ ಉಗಾರ ಪಟ್ಟಣದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಳೆದ ಎಳೆಂಟು ವರ್ಷಗಳಿಂದ ಬಸ್ ಟಿಕೆಟ್ ದರ ಏರಿಕೆಯಾಗಿಲ್ಲ. ಡಿಸೇಲ್, ಆಯಿಲ್, ಟಾಯರ ಹಾಗೂ ಬಿಡಿ ಭಾಗಗಳ ದರ ಏರಿಕೆಯಾಗಿದೆ. ಸರ್ಕಾರ ಅನಿವಾರ್ಯವಾಗಿ ಟಿಕೆಟ್ ದರ ಏರಿಕೆ ಮಾಡಿದೆ. ಪ್ರತಿ ದಿನ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಒಂದು ಕೋಟಿ ಹಾನಿಯಲ್ಲಿದೆ. ಹೊಸ ಬಸ್ಗಳನ್ನು ಈಗಾಗಲೇ ಖರೀದಿ ಮಾಡಿದ್ದೇವೆ. ಕಳೆದ ಐದಾರು ವರ್ಷಗಳಿಂದ ಬಸ್ ಖರೀದಿ ಮಾಡಿಲ್ಲ. ಈಗ ಐದನೂರು ಹೊಸ ಬಸ್ ಖರೀದಿ ಮಾಡಿದ್ದೇವೆ’ ಎಂದರು.

‘ಜನರ ಸೇವೆಗೆ ಬಸ್ ಖರೀದಿ ಮಾಡಿದಾಗ ಬಸ್ ಟಿಕೆಟ್ ದರ ಏರಿಕೆ ಮಾಡುವುದು ಅನಿವಾರ್ಯ ಡಿಸೇಲ್ ₹50 ಇದ್ದಾಗ ಇದೇ ಟಿಕೆಟ್ ದರ ಇತ್ತು. ಆದರೆ, ಈಗ ಡಿಸೇಲ್ ದರ ಏರಿಕೆಯಾಗಿದೆ. ಟಿಕೆಟ್ ದರ ಏರಿಕೆ ಮಾಡಿದ್ದೇವೆ. ಕಳೆದ ಬಿಜೆಪಿ ಸರ್ಕಾರ ಕೆಎಸ್ಆರ್ಟಿಸಿಯನ್ನು ನಷ್ಟ ಮಾಡಿದ್ದಾರೆ‘ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.