ಭಾನುವಾರ, ಅಕ್ಟೋಬರ್ 25, 2020
24 °C
ವಿಮಾನ ನಿಲ್ದಾಣ, ಕಾರಾಗೃಹದಲ್ಲಿ ಪರಿಶೀಲನೆ

ಆಂತರಿಕ ಭದ್ರತೆ ಬಗ್ಗೆ ನಿಗಾ: ಭಾಸ್ಕರ್‌ ರಾವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ದೇಶ ವಿರೋಧಿ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುವುದು, ಈಗಾಗಲೇ ಎನ್ಐಎ ಹಾಗೂ ಭಯೋತ್ಪಾದನಾ ಪ್ರಕರಣಗಳಲ್ಲಿ ಖುಲಾಷೆಯಾದವರ ಮೇಲ ನಿಗಾ ವಹಿಸುವುದು ಮತ್ತು ಶಿಕ್ಷೆ ಪೂರ್ಣಗೊಳಿಸಿದವರ ಚಲನವಲನಗಳ ಮೇಲೆ ಕಣ್ಣಿಡುವುದು ನಮ್ಮ ಪ್ರಮುಖ ಕೆಲಸವಾಗಿದೆ’ ಎಂದು ಆಂತರಿಕ ಭದ್ರತಾ ವಿಭಾಗದ ಮುಖ್ಯಸ್ಥ ಭಾಸ್ಕರ್ ರಾವ್ ತಿಳಿಸಿದರು.

ಇಲ್ಲಿನ ಆಂತರಿಕ ಭದ್ರತಾ ವಿಭಾಗದ ಕಚೇರಿಗೆ ಭೇಟಿ ಹಾಗೂ ಹಿಂಡಲಗಾ ಜೈಲಿನ ಭದ್ರತೆ ಪರಿಶೀಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

‘ಮಾದಕ ವಸ್ತುಗಳು, ಶಸ್ತ್ರಾಸ್ತ್ರ, ಟ್ರಾವೆಲ್‌ ಏಜೆನ್ಸಿಗಳು, ಅಕ್ರಮವಾಗಿ ಹೊರಗಡೆ ಹೋಗಲು ಪ್ರಯತ್ನ ಮಾಡುವವರ ಬಗ್ಗೆ ನಿಗಾ ಇಡುತ್ತಿದ್ದೇವೆ. ರಾಜ್ಯದ ಸುರಕ್ಷತೆ ಹಾಗೂ ಭದ್ರತೆ ಬಗ್ಗೆ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ನಡೆಸುತ್ತಿರುತ್ತೇವೆ’ ಎಂದು ಹೇಳಿದರು.

‘ಇಲಾಖೆಯನ್ನು ಶಕ್ತಗೊಳಿಸಲು ಸಿಬ್ಬಂದಿಗೆ ಹೆಚ್ಚಿನ ತರಬೇತಿ ನೀಡಲಾಗುವುದು’ ಎಂದರು.

‘ನಗರದಲ್ಲಿ ಈಗಿರುವ ಕಚೇರಿ ಸ್ಥಳಾಂತರಿಸಿ, ಸಾರ್ವಜನಿಕರಿಗೆ ಗೊತ್ತಾಗುವ ರೀತಿಯಲ್ಲಿ ಪ್ರಮುಖ ಸ್ಥಳದಲ್ಲಿ ಕಚೇರಿ ಆರಂಭಿಸಬೇಕು. ಯಾವ್ಯಾವ ವಿಷಯಗಳಲ್ಲಿ ದೂರು ದಾಖಲಿಸಬಹುದು ಎನ್ನುವುದನ್ನು ಪ್ರಚಾರ ಮಾಡಬೇಕು ಎಂದು ಸೂಚಿಸಿದ್ದೇನೆ’ ಎಂದು ತಿಳಿಸಿದರು.

‘ರಾಜ್ಯದ ಆರು ವಿಮಾನನಿಲ್ದಾಣಗಳು, ವಿದ್ಯುತ್‌ ಸ್ಥಾವರಗಳು, ಜಲಾಶಯಗಳಿಗೆ ಕೈಗಾರಿಕಾ ಭದ್ರತಾ ಪಡೆಯಿಂದ ಭದ್ರತೆ ಒದಗಿಸುತ್ತಿದ್ದೇವೆ’ ಎಂದು ತಿಳಿಸಿದರು.

‘ಕೇಂದ್ರದ ಎನ್‌ಐಎ ರೀತಿಯಲ್ಲಿ ಐಎಸ್‌ಡಿ ಮಾಡಬಹುದಾಗಿದೆ. ದೇಶ ವಿರೋಧಿ ಚಟುವಟಿಕೆಗಳ ಮೇಲೆ ಕಣ್ಣಿಡುವ ಪ್ರಮುಖ ಜವಾಬ್ದಾರಿ ನಮ್ಮ ಮೇಲಿದೆ. ಇದಕ್ಕೆ ತಕ್ಕಂತೆ ಸರ್ಕಾರ ಮುಕ್ತವಾದ ಅವಕಾಶ ನೀಡಿದೆ. ಸಿಎಸ್‌ಐಎಫ್‌ ಜೊತೆ ಸೇರಿ ವೃತ್ತಿಪರವಾಗಿ ಕಾರ್ಯನಿರ್ವಹಿಸುತ್ತೇವೆ. ಭದ್ರತೆ ಒದಗಿಸುವಂತೆ ಹಣಕಾಸು ಸಂಸ್ಥೆಗಳ ಕಡೆಯಿಂದ ಬಹಳ ಬೇಡಿಕೆ ಬರುತ್ತಿದೆ. ಸಿಎಸ್‌ಐಎಫ್‌ ಬೇಕಾದರೆ ದುಬಾರಿಯಾಗುತ್ತದೆ. ಹೀಗಾಗಿ, ರಾಜ್ಯ ಕೈಗಾರಿಕಾ ಭದ್ರತಾ ಪಡೆಯನ್ನು ನಿಯೋಜಿಸಬೇಕು ಎಂದು ಕೋರುತ್ತಿವೆ. ಈ ಪ್ರಸ್ತಾವ ಸರ್ಕಾರ ಮುಂದಿದೆ’ ಎಂದು ಹೇಳಿದರು.

ನಂತರ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು