ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಲಿಂಗೇಶ್ವರ ಜಾತ್ರೆ ಇಂದಿನಿಂದ

Published 7 ಮಾರ್ಚ್ 2024, 6:33 IST
Last Updated 7 ಮಾರ್ಚ್ 2024, 6:33 IST
ಅಕ್ಷರ ಗಾತ್ರ

ಘಟಪ್ರಭಾ: ಸಮೀಪದ ಗೋಕಾಕ್ ಫಾಲ್ಸ್‌ನಲ್ಲಿ ಜಕಣಾಚಾರಿಯಿಂದ ನಿರ್ಮಿತವಾದ ತಡಸಲ ಮಹಾಲಿಂಗೇಶ್ವರನ ಜಾತ್ರೆಯು ಶಿವರಾತ್ರಿ ಅಂಗವಾಗಿ ಮಾರ್ಚ್ 7ರಿಂದ ಮೂರು ದಿನ ವೈಭೌವದಿಂದ ನಡೆಯಲಿದೆ.

ದೇವಸ್ಥಾನದ ಪರಿಸರವನ್ನು ಶುಚಿಗೊಳಿಸಿ, ಮನೆಯಂಗಳದೆದುರು ರಂಗೋಲಿ, ತೋರಣಗಳಿಂದ ಅಲಂಕರಿಸಲಾಗಿದೆ. ಮಾರ್ಚ್ 8ರ ಸಂಜೆ ವೈಭವ ರಥೋತ್ಸವ ವಾದ್ಯಮೇಳ ಹಾಗೂ ಜಯಘೋಷಗಳಿಂದ ಪ್ರತಿ ಮನೆಯ ಮುಂದೆ ಸಾಗುತ್ತದೆ ಮಂದಿರಕ್ಕೆ ಮರಳುತ್ತದೆ.

ಮಾರ್ಚ್ 7ರಂದು ಸಂಜೆ 6 ಗಂಟೆಗೆ ಯರಗಲ್‌ಮಠದ ಅಭಿನಂದನ ಸ್ವಾಮೀಜಿ ಜಾತ್ರಾ ಮಹೋತ್ಸವ ಉದ್ಘಾಟಿಸಲಿದ್ದಾರೆ.

8ರಂದು ಬೆಳಿಗ್ಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ನೈವೇದ್ಯ, ನಂತರ ಭಜನೆ ನಡೆಯಲಿದೆ. ಸಂಜೆ 4.30ಕ್ಕೆ ಮರಡಿಮಠದ ಪವಾಡೇಶ್ವರಸ್ವಾಮಿ ಸಾನ್ನಿಧ್ಯದಲ್ಲಿ ನಡೆಯುವ ರಥೋತ್ಸವಕ್ಕೆ ಶಾಸಕ ರಮೇಶ ಜಾರಕಿಹೊಳಿ ಚಾಲನೆ ನೀಡಲಿದ್ದಾರೆ.

9ರಂದು ಬೆಳಗ್ಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ನೈವೇದ್ಯ ನಂತರ ಭಜನೆ ಹಾಗೂ ಪಲ್ಲಕ್ಕಿ ಉತ್ಸವವು ಶ್ರೀರಾಮ ಮಂದಿರದಿಂದ ಮಹಾಲಿಂಗೇಶ್ವರ ಗುಡಿಯವರೆಗೆ ನಡೆಯಲಿದ್ದು, ವಾದ್ಯಮೇಳದೊಂದಿಗೆ ಅಂಬಲಿ ಕೊಡಗಳನ್ನು ತರಲಾಗುವುದು. ನಂತರ ಮಹಾಪ್ರಸಾದ ವಿತರಣೆ ನಡೆಯಲಿದೆ.

ಇಲ್ಲಿ ನೆಲೆಸಿರುವ ಕಾರ್ಮಿಕರು ಎಲ್ಲ ಜಾತಿ, ಜನಾಂಗದವರು ಈ ಜಾತ್ರಾ ಮಹೋತ್ಸವದಲ್ಲಿ ಶ್ರದ್ಧೆಯಿಂದ ಭಾವಗವಹಿಸುವ ಮೂಲಕ ಸೌಹಾರ್ದ ಮೆರೆಯುತ್ತಾರೆ.

ಘಟಪ್ರಭಾ ಸಮೀಪದ ಗೋಕಾಕ್ ಫಾಲ್ಸ್‌ನ ಐತಿಹಾಸಿಕ ತಡಸಲ ಮಹಾಲಿಂಗೇಶ್ವರ ಗುಡಿ
ಘಟಪ್ರಭಾ ಸಮೀಪದ ಗೋಕಾಕ್ ಫಾಲ್ಸ್‌ನ ಐತಿಹಾಸಿಕ ತಡಸಲ ಮಹಾಲಿಂಗೇಶ್ವರ ಗುಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT