ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗವಾಡ | ಶಾರ್ಟ್‌ ಸರ್ಕಿಟ್‌: ಅಂಗಡಿಗಳಿಗೆ ಹಾನಿ

Published 31 ಮೇ 2024, 13:10 IST
Last Updated 31 ಮೇ 2024, 13:10 IST
ಅಕ್ಷರ ಗಾತ್ರ

ಕಾಗವಾಡ: ತಾಲ್ಲೂಕಿನ ಶಿರುಗುಪ್ಪಿ ಗ್ರಾಮದ ಶಿವಶಕ್ತಿ ವೀಲ್‌ರ್ಸ್ ಟೈರ್ ಅಂಗಡಿಗೆ ಶಾರ್ಟ್ ಸರ್ಕಿಟ್‌ನಿಂದಾಗಿ ಬೆಂಕಿ ತಗಲಿದ್ದು, ಎಲ್ಲ ಸಾಮಾನುಗಳು ಅಗ್ನಿಗಾಹುತಿಯಾಗಿವೆ. ಅಂದಾಜು ₹45 ಲಕ್ಷ ಮತ್ತು ಅದರ ಪಕ್ಕದಲ್ಲಿರುವ ಜೀವನ ಆಗ್ರೋಟೆಕ್ ಗೊಬ್ಬರ ಹಾಗೂ ಬೆಳೆಗಳಿಗೆ ಸಿಂಪಡಿಸುವ ಔಷಧ ಅಂಗಡಿಗೆ ಬೆಂಕಿಯ ಝಳ ತಾಗಿ ಅಲ್ಲಿದ್ದ ರಸಗೊಬ್ಬರ ಮತ್ತು ಬೆಳೆಗಳಿಗೆ ಸಿಂಪಡಿಸುವ ಔಷಧ ಸೇರಿ ಅಂದಾಜು ₹40 ಲಕ್ಷ ಸೇರಿ ಸುಮಾರು ₹85 ಲಕ್ಷ ಮೊತ್ತದಷ್ಟು ಹಾನಿ ಸಂಭವಿಸಿದೆ.

ಶುಕ್ರವಾರ ಬೆಳಿಗ್ಗೆ ಗ್ರಾಮದಲ್ಲಿರುವ ಅನೀಲ ಖಂಡು ಮಾಳಿ ಅವರ ಒಡೆತನದ ಶಿವಶಕ್ತಿ ವೀಲ್‌ರ್ಸ್ ಟೈರ್ ಅಂಗಡಿಗೆ ಶಾರ್ಟ್ ಸರ್ಕಿಟ್‌ನಿಂದಾಗಿ ಬೆಂಕಿ ತಗಲಿದೆ ಅದರಲ್ಲಿ ಇರುವ ಎರಡು ಮಾರುತಿ ಕಾರುಗಳು, ಯಂತ್ರೋಪಕರಣಗಳು ಸೇರಿದಂತೆ ಸುಮಾರು ₹45 ಲಕ್ಷದಷ್ಟು ಹಾನಿಯಾಗಿದೆ.

ಅಗ್ನಿ ನಂದಿಸಲು ಸ್ಥಳೀಯರು ಮತ್ತು ರಾಯಬಾಗ, ಉಗಾರ, ಚಿಕ್ಕೋಡಿ, ನಿಪ್ಪಾಣಿಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಿದರು. ಕಾಗವಾಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ.

ಬೆಂಕಿಯಿಂದ ಅಂಗಡಿಯಲ್ಲಿದ್ದ ಎರಡು ಕಾರುಗಳು ಸುಟ್ಟ ಕರಕಲಾಗಿವೆ
ಬೆಂಕಿಯಿಂದ ಅಂಗಡಿಯಲ್ಲಿದ್ದ ಎರಡು ಕಾರುಗಳು ಸುಟ್ಟ ಕರಕಲಾಗಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT