ಸೋಮವಾರ, ಸೆಪ್ಟೆಂಬರ್ 27, 2021
21 °C

ಬೈಲಹೊಂಗಲ: ‘ಕಾರ್ಗಿಲ್ ವಿಜಯ ಹೆಮ್ಮೆಪಡುವ ದಿನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೈಲಹೊಂಗಲ: ‘ಭಾರತೀಯ ಸೇನೆಯಲ್ಲಿ ಸೇವೆ ಮಾಡುವುದೆ ಪುಣ್ಯ. ಅಂತಹ ಸೇವೆಯಲ್ಲಿರುವ ಪ್ರತಿಯೊಬ್ಬ ಯೋಧರೂ ದೇವರ ಸಮಾನ. ಆ ದೇವತಾ ಸ್ವರೂಪಿಯಾಗಿರುವ ಯೋಧರಿಗೆ ಸಲ್ಲಿಸುವ ಗೌರವ, ಪ್ರೀತಿ, ಅಭಿಮಾನಕ್ಕೆ ಬೆಲೆ ಕಟ್ಟಲಾಗದು' ಎಂದು ನಿವೃತ್ತ ಸೇನಾಧಿಕಾರಿ ಪರ್ವೆಜ್ ಹವಾಲ್ದಾರ್ ಹೇಳಿದರು.

ತಾಲ್ಲೂಕಿನ ಮೇಕಲಮರ್ಡಿ ಗ್ರಾಮದಲ್ಲಿ ಜಯ ಕರ್ನಾಟಕ ಸಂಘಟನೆ ಮತ್ತು ಗೆಳೆಯರ ಬಳಗದಿಂದ ಸೋಮವಾರ ನಡೆದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು.

'ಕಾರ್ಗಿಲ್ ವಿಜಯೋತ್ಸವ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವ ದಿನವಾಗಿದೆ. ಈ ದಿನ ಸ್ಮರಣೆ ಮಾಡಿಕೊಂಡು ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ, ಸೇವೆ, ನಿವೃತ್ತಿ ಹೊಂದಿರುವ ಸೈನಿಕರಿಗೆ ಗೌರವ ಸಲ್ಲಿಸುವ ಸಂಘಟನೆಯವರ ಕಾರ್ಯ ಪ್ರಶಂಸನೀಯ' ಎಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ನಿಂಗಪ್ಪ ಅರಕೇರಿ ಅಧ್ಯಕ್ಷತೆ ವಹಿಸಿದ್ದರು.

ಇದೇ ವೇಳೆ ನಿವೃತ್ತ ಸೈನಿಕ ವೀರು ದೊಡ್ಡವೀರಪ್ಪನವರ ಸೇರಿದಂತೆ ಹಲವರನ್ನು ಸತ್ಕರಿಸಲಾಯಿತು. ಸಂಘಟಕರಾದ ಕಾಶೀಮ್ ಜಮಾದಾರ, ಮಂಜುನಾಥ ಹೊಸಮನಿ, ಬಾಬು ಹೊಸಮನಿ, ವಿನೋದ ಹೊಸಮನಿ, ಮಲ್ಲೇಶ ಕುರಿ, ಮಹಾಂತೇಶ ಸತ್ತಿಗೇರಿ, ಮಲ್ಲಿಕಾರ್ಜುನ ಮುತವಾಡ, ಬಸವರಾಜ ಚಿಕ್ಕನಗೌಡ, ವಿನಾಯಕ ಮಾಸ್ತಮರ್ಡಿ, ಬಾಬು ಬಾಗವಾನ, ಕಿತ್ತೂರು ಪಟ್ಟಣ ಪಂಚಾಯ್ತಿ ಸದಸ್ಯ ಅಶ್ಪಕ್ ಹವಾಲ್ದಾರ್, ಗ್ರಾಮಸ್ಥರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.