ಗುರುವಾರ , ಆಗಸ್ಟ್ 5, 2021
23 °C

ಕಾಲೆಳೆಯುವುದು ನಿಂತರೆ ಕಾಂಗ್ರೆಸ್‌ಗೆ ಮತ್ತೆ ಅಧಿಕಾರ: ಪ್ರಕಾಶ ಹುಕ್ಕೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ರಾಜ್ಯದಲ್ಲಿ ಲಿಂಗಾಯತರೆಲ್ಲರೂ ಒಂದಾದರೆ ಮತ್ತು ಪಕ್ಷದಲ್ಲಿರುವವರು ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುವುದನ್ನು ನಿಲ್ಲಿಸಿ ಚುನಾವಣೆಗೆ ಒಗ್ಗಟ್ಟಾಗಿ ಹೋದರೆ ಮುಂದಿನ ಬಾರಿ (2023ಕ್ಕೆ) ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ’ ಕಾಂಗ್ರೆಸ್ ಮುಖಂಡ ಪ್ರಕಾಶ ಹುಕ್ಕೇರಿ ಹೇಳಿದರು.

ಇಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾನು ದೊಡ್ಡವನು, ನೀನು ದೊಡ್ಡವನು ಎನ್ನುವುದು, ಕಾಲೆಳೆಯುವುದು ನಮ್ಮೊಳಗೆಯೇ ನಡೆದಿದೆ. ಇದು ನಿಲ್ಲಬೇಕು. ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ನಮ್ಮ ಪಕ್ಷದವರೇ ಸೋಲಿಸುವ ಕೆಲಸ ಮಾಡುತ್ತಾರೆ. ಅದು ನಡೆಯಬಾರದು’ ಎಂದರು.

‘ನಾನು ನನ್ನ ಅನುಭವದ ಮಾತುಗಳನ್ನು ಹೇಳುತ್ತಿದ್ದೇನೆ’ ಎಂದು ತಿಳಿಸಿದರು.

ಇದನ್ನೂ ಓದಿ... ಬಿಜೆಪಿಗರ ಬಾಯಲ್ಲಿ ಲಸಿಕೆ ಅಭಿಯಾನ, ವಾಸ್ತವದಲ್ಲಿ ಲಸಿಕೆ ಅಧ್ವಾನ: ಕಾಂಗ್ರೆಸ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು