ಮಂಗಳವಾರ, ನವೆಂಬರ್ 19, 2019
22 °C

ಕಾಶ್ಮೀರದಲ್ಲಿ ಪಾಕ್‌ ಸೇನೆಯೊಂದಿಗೆ ಗುಂಡಿನ ಚಕಮಕಿ: ಬೆಳಗಾವಿ ಯೋಧ ಹುತಾತ್ಮ

Published:
Updated:

ಶ್ರೀನಗರ: ಪೂಂಛ್‌ ಜಿಲ್ಲೆಯ ಕೃಷ್ಣ ಘಾಟಿ ವಲಯದಲ್ಲಿ ನುಸುಳುಕೋರರಿಗೆ ನೆರವಾಗಲೆಂದು ಪಾಕ್‌ ಸೇನೆ ಗುರುವಾರ ನಡೆಸಿದ ತೀವ್ರ ಗುಂಡಿನ ದಾಳಿಯಲ್ಲಿ ಬೆಳಗಾವಿ ಜಿಲ್ಲೆ ಉಚ್ಚಗಾವ್‌ನ ಯೋಧ ರಾಹುಲ್ ಭೈರು ಸುಳಗೇಕರ್ ಹುತಾತ್ಮರಾದರು.

ಪಾಕ್‌ ಸೇನೆಯ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೇನೆ ಸೂಕ್ತ ಪ್ರತ್ಯುತ್ತರ ನೀಡಿತು. ಗುಂಡಿನ ಚಕಮಕಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸುಳಗೇಕರ್‌ ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು.

ಚಿಕಿತ್ಸೆ ಫಲಕಾರಿಯಾಗದೆ ಅವರು ಹುತಾತ್ಮರಾದರು ಎಂದು ಸೇನೆ ಹೇಳಿದೆ. ಮೃತ ಯೋಧ ಸುಳಗೇಕರ್ ಅವರಿಗೆ 21 ವರ್ಷ ವಯಸ್ಸು. ತಾಯಿ ಗೀತಾ ಇದ್ದಾರೆ.

ಪ್ರತಿಕ್ರಿಯಿಸಿ (+)