ಚನ್ನಮ್ಮನ ಕಿತ್ತೂರು: ಅ.23 ರಿಂದ 25 ರವರೆಗೆ ನಡೆಯುವ 200 ನೇ ಚನ್ನಮ್ಮನ ಕಿತ್ತೂರು ಉತ್ಸವದ ಅಂಗವಾಗಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಕಿರಣ ಘೋರ್ಪಡೆ ನೇತೃತ್ವದಲ್ಲಿ ಐತಿಹಾಸಿಕ ಸ್ಥಳಗಳನ್ನು ಗುರುವಾರ ಸ್ವಚ್ಛಗೊಳಿಸಲಾಯಿತು.
ನಂತರ ಮಾತನಾಡಿದ ಕಿರಣ, ‘ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಿತ್ತೂರು ಸಂಸ್ಥಾನದ ಸ್ಮಾರಕಗಳು ಹಾಗೂ ಐತಿಹಾಸಿಕ ತಾಣಗಳನ್ನು ಉತ್ಸವದ ಅಂಗವಾಗಿ ಸ್ವಚ್ಛಗೊಳಿಸಲಾಗುತ್ತಿದೆ. ತಾಲೂಕು ಪಂಚಾಯಿತಿ ಕಿತ್ತೂರು ಹಾಗೂ ಗ್ರಾಮ ಪಂಚಾಯಿತಿ ದೇವರಶೀಗಿಹಳ್ಳಿ ಸಹಯೋಗದಲ್ಲಿ ‘ಸ್ವಚ್ಛತೆಯೆಡೆಗೆ ದಿಟ್ಟ ಹೆಜ್ಜೆ’ ಕಾರ್ಯಕ್ರಮದಡಿ ತಾಲ್ಲೂಕಿನ ದೇವರಶೀಗಿಹಳ್ಳಿ ಗ್ರಾಮದ ಹಳ್ಳದ ಬಸವಣ್ಣ ದೇವಾಸ್ಥಾನ ಸುತ್ತಲೂ ಸ್ವಚ್ಛತೆ ಕಾರ್ಯಕ್ರಮ ನಡೆಸಲಾಯಿತು’ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ ಬಡಿಗೇರ, ಪಿಡಿಓ ವಿನಯಕುಮಾರ ಕೊರವಿ, ಕಾರ್ಯದರ್ಶಿ ಮಡಿವಾಳಿ ಕಲಭಾಂವಿ, ಉಮೇಶ ಹೈಬತ್ತಿ, ಶಿವಪುತ್ರ ಹುಕ್ಕೇರಿ, ಬಸವರಾಜ ಗುಂಡಗಾವಿ, ಕರೆಪ್ಪ ಪೂಜಾರ, ಮಾಹದೇವಿ ಬಬಲಿಕೊಪ್ಪ ಸೇರಿದಂತೆ ಅನೇಕರು ಇದ್ದರು.