ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಿತ್ತೂರು ಪಿಕೆಪಿಎಸ್‌ಗೆ ಚುನಾವಣೆ: ಫಲಿತಾಂಶಕ್ಕೆ ಹೈಕೋರ್ಟ್ ತಡೆ

Published : 30 ಜುಲೈ 2023, 14:58 IST
Last Updated : 30 ಜುಲೈ 2023, 14:58 IST
ಫಾಲೋ ಮಾಡಿ
Comments

ಚನ್ನಮ್ಮನ ಕಿತ್ತೂರು: ಶತಮಾನ ಪೂರೈಸಿರುವ ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಡಳಿತ ಮಂಡಳಿಯ 12 ಸ್ಥಾನಗಳಿಗೆ ಭಾನುವಾರ ಮತದಾನ ನಡೆಯಿತು. ಆದರೆ, ಫಲಿತಾಂಶ ಘೋಷಿಸದಂತೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಮತಗಳ ಎಣಿಕೆಯೂ ನಡೆಯಲಿಲ್ಲ.

ಆ.2ರಂದು ಪ್ರಕರಣ ಮತ್ತೆ ವಿಚಾರಣೆಗೆ ಬರಲಿದೆ. ಆನಂತರ ಮತಗಳ ಎಣಿಕೆ ಮತ್ತು ಫಲಿತಾಂಶ ಘೋಷಣೆ ಬಗ್ಗೆ ನಿರ್ಧಾರವಾಗಲಿದೆ ಎಂದು ಚುನಾವಣಾಧಿಕಾರಿ ರಾಕೇಶ ಗೋವನಕೊಪ್ಪ ಪತ್ರಕರ್ತರಿಗೆ ತಿಳಿಸಿದರು.

ತುರುಸಿನ ಮತದಾನ: ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಮತದಾನ ತುರುಸಿನಿಂದ ಕೂಡಿತ್ತು. ಸಾಲಗಾರ ಕ್ಷೇತ್ರದ 913 ಮತದಾರರಲ್ಲಿ 833 ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಸಾಲಗಾರೇತರ ಕ್ಷೇತ್ರದ 278 ಮತದಾರರಲ್ಲಿ 204 ಜನ ಮತ ಚಲಾವಣೆ ಮಾಡಿದರು.

ಹೈಕೋರ್ಟ್‌ನಿಂದ ಮತದಾನ ಹಕ್ಕು ತಂದಿದ್ದ ಸಾಲಗಾರ ಕ್ಷೇತ್ರದ 549ರಲ್ಲಿ 418 ಮತ್ತು ಸಾಲಗಾರೇತರ ಕ್ಷೇತ್ರದ 105 ಮತದಾರರಲ್ಲಿ 79 ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಹೈಕೋರ್ಟ್‌ನಿಂದ ಎರಡೂ ಕ್ಷೇತ್ರಗಳಲ್ಲಿ ಮತದಾನ ಹಕ್ಕು ತಂದಿದ್ದ ಮತದಾರರಲ್ಲಿ 157 ಜನ ಮತಚಲಾಯಿಸದಿರುವುದು ಅಚ್ಚರಿಗೆ ಕಾರಣವಾಯಿತು .ಹೈಕೋರ್ಟ್‌ನಿಂದ ಹಕ್ಕು ತಂದಿದ್ದ ಮತದಾರರಿಗೆ ಪ್ರತ್ಯೇಕ ಐದು ಮತಗಟ್ಟೆಗಳನ್ನು ನಿರ್ಮಿಸಲಾಗಿತ್ತು.

ಭದ್ರತಾ ಕೊಠಡಿಗೆ ಮತಪೆಟ್ಟಿಗೆ:

ಮತದಾನದ ಪ್ರಕ್ರಿಯೆ ಮುಗಿದ ನಂತರ ಒಂಬತ್ತು ಮತಪೆಟ್ಟಿಗೆಗಳನ್ನು ಬೈಲಹೊಂಗಲ ಖಜಾನೆ ಕಚೇರಿಯ ಭದ್ರತಾ ಕೊಠಡಿಗೆ ತೆಗೆದುಕೊಂಡು ಹೋಗಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT