ಭಾನುವಾರ, ಸೆಪ್ಟೆಂಬರ್ 19, 2021
24 °C

ಕಿತ್ತೂರು ತಾ.ಪಂ: ಚನ್ನಮ್ಮಗೆ ಸಾರಥ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಮ್ಮನ ಕಿತ್ತೂರು: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಿತ್ತೂರು ತಾಲ್ಲೂಕು ಪಂಚಾಯಿತಿ ಪ್ರಥಮ ಅಧ್ಯಕ್ಷೆಯಾಗಿ ಹುಣಸೀಕಟ್ಟಿ ಕ್ಷೇತ್ರದ ಸದಸ್ಯೆ ಚನ್ನಮ್ಮ ರುದ್ರಪ್ಪ ಹೊಸಮನಿ ಮತ್ತು ಉಪಾಧ್ಯಕ್ಷೆಯಾಗಿ ದೇಗಾಂವ ಕ್ಷೇತ್ರದ ಹೇಮಾವತಿ ಪರಶುರಾಮ ಬೇಕವಾಡಕರ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

ಅವಿಜಿತ ಬೈಲಹೊಂಗಲ ತಾಲ್ಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷೆ ಶೈಲಾ ಸಿದ್ರಾಮನಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಸೂಚಿಸಿದರು. ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಮೀನಾಕ್ಷಿ ಚಕ್ಕಡಿ ಸೂಚಿಸಿದರು. ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಇಒ ಸುಭಾಷ್ ಸಂಪಗಾಂವಿ ಇದ್ದರು. ಎಲ್ಲ 9 ಮಂದಿ ಸದಸ್ಯರೂ ಪಾಲ್ಗೊಂಡಿದ್ದರು.

ಆಯ್ಕೆಯಾದವರನ್ನು ಶಾಸಕ ಮಹಾಂತೇಶ ದೊಡ್ಡಗೌಡರ, ಮಂಡಳ ಅಧ್ಯಕ್ಷ ಡಾ.ಬಸವರಾಜ ಪರವಣ್ಣವರ, ಮುಖಂಡರಾದ ಸಂದೀಪ ದೇಶಪಾಂಡೆ, ಚನಬಸಪ್ಪ ಮೊಕಾಶಿ, ನಿಜಲಿಂಗಯ್ಯ ಹಿರೇಮಠ, ಬಸನಗೌಡ ಸಿದ್ರಾಮನಿ, ಶ್ರೀಕರ ಕುಲಕರ್ಣಿ, ಬಸವರಾಜ ಕೊಳದೂರ, ಉಮಾದೇವಿ ಬಿಕ್ಕಣ್ಣವರ, ಉಳವಪ್ಪ ಉಳ್ಳೇಗಡ್ಡಿ, ರಮೇಶ ಉಗರಕೋಡ, ಸರಸ್ವತಿ ಹೈಬತ್ತಿ ಅಭಿನಂದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು