ಬೆಳಗಾವಿ: ‘ಜೈಂಟ್ ಸಿಸ್ಟಿಕ್ ಮೆಕೊನಿಯಮ್ ಪೆರಿಟೊನಿಟಿಸ್’ ಎಂಬ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ನವಜಾತ ಶಿಶುವಿಗೆ, ಇಲ್ಲಿನ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯರು ಶಸ್ತ್ರಚಿಕಿತ್ಸೆ ನೆರವೇರಿಸಿ ಮರುಜನ್ಮ ನೀಡಿದ್ದಾರೆ.

ಆಸ್ಪತ್ರೆಯ ಚಿಕ್ಕಮಕ್ಕಳ ತಜ್ಞ ಶಸ್ತ್ರಚಿಕಿತ್ಸಕ ಡಾ.ಸಂತೋಷ ಕುರಬೆಟ್ ಅವರ ನೇತೃತ್ವದ ತಂಡವು ಹಸುಳೆಯನ್ನು ಸಾವಿನ ದವಡೆಯಿಂದ ಪಾರು ಮಾಡಿದೆ. ಅತ್ಯಂತ ಕ್ಲಿಷ್ಟಕರವಾದ ಈ ಶಸ್ತ್ರಚಿಕಿತ್ಸೆಯಲ್ಲಿ ಯಶಸ್ವಿಯಾಗಿದೆ.

ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ರೈತ ಮಹಿಳೆ ಮದುವೆಯಾಗಿ 14 ವರ್ಷಗಳ ನಂತರ ಗರ್ಭವತಿಯಾಗಿದ್ದರು. ಗರ್ಭಕ್ಕೆ ಕೇವಲ 32 ವಾರಗಳಲ್ಲಿ ತೊಂದರೆ ಕಾಣಿಸಿಕೊಂಡ ಪರಿಣಾಮ ನಗರದ ಖಾಸಗಿ ಆಸ್ಪತ್ರೆಯಲ್ಲಿ ಡಾ.ಅಸ್ಮಿತಾ ಕಟ್ಟಿ ಅವರು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದರು. ಅವಧಿಗೆ ಮುನ್ನ ಜನಿಸಿದ್ದರಿಂದ ಶಿಶುವಿನ ತೂಕ ಒಂದೂವರೆ ಕೆ.ಜಿ ಮಾತ್ರ. ಪ್ಲೇಟ್ಲೆಟ್ ತೀವ್ರ ಕಡಿಮೆಗೊಂಡು, ರಕ್ತ ಹೆಪ್ಪುಗಟ್ಟುವಿಕೆಯಿಂದ ಬಳಲುತ್ತಿತ್ತು. ಆಸ್ಪತ್ರೆಗೆ ಬಂದ ತಕ್ಷಣ ಮಗುವನ್ನು ಸಮಗ್ರವಾಗಿ ತಪಾಸಣೆಗೊಳ್ಪಡಿಸಿದಾಗ ನವಜಾತ ಶಿಶು ಅತ್ಯಂತ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದು ಗೊತ್ತಾಯಿತು.

ಆಗ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಶಿಶುವಿನ ಸಮಸ್ಯೆ ಏನೆಂದು ಕಂಡುಕೊಂಡ ವೈದ್ಯರ ತಂಡ, ಶಸ್ತ್ರಚಿಕಿತ್ಸೆಗೆ ಮೊದಲು ಶಿಶುವಿನ ಆರೋಗ್ಯಕ್ಕೆ ಅವಶ್ಯವಿರುವ ಎಂಡೋ– ಟ್ರಾಕಿಯಲ್ ಇಂಟ್ಯೂಬೇಷನ್ ಮಾಡಿ, ಪ್ಲೇಟ್ಲೆಟ್ ಮತ್ತು ಪ್ಲಾಸ್ಮಾ ರಕ್ತಪೂರಣ ನೆರವೇರಿಸಿ, ಅನಗತ್ಯವಾಗಿರುವ ಚೀಲವನ್ನು ತೆಗೆದುಹಾಕಿ, ಜೆಜುನಲ್ ಅಟ್ರೆಸಿಯಾವನ್ನು ಶಸ್ತ್ರಚಿಕಿತ್ಸೆ ನೆರವೇರಿಸುವ ಮೂಲಕ ಸರಿಪಡಿಸಿದರು.

ಸುಮಾರು 20 ವರ್ಷಗಳ ಕಾಲ ಚಿಕ್ಕಮಕ್ಕಳ ಶಸ್ತ್ರಚಿಕಿತ್ಸೆಯಲ್ಲಿ ನುರಿತಿರುವ ಡಾ.ಸಂತೋಷ ಕುರಬೆಟ್ ಅವರು 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನೆರವೇರಿಸಿದರು. ಕೇವಲ 7 ದಿನಗಳಲ್ಲಿ ಶಿಶು ಸಂಪೂರ್ಣವಾಗಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಮರಳಿದೆ. ಈ ರೀತಿಯ ತೊಂದರೆಯಿಂದ ಜನ್ಮತಾಳಿದ ಶಿಶುಗಳಲ್ಲಿ ಕೆಲವೇ ಕೆಲವು ಪ್ರಕರಣಗಳು ಕಂಡು ಬಂದಿವೆ. ಅದರಲ್ಲಿಯೂ ಬದುಕುಳಿಯುವುದು ವಿರಳ ಎಂದು ವೈದ್ಯರು ತಿಳಿಸಿದ್ದಾರೆ.

ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ.ಸಂತೋಷ್ ನೇತೃತ್ವದ ತಂಡ ಮತ್ತು ನಂತರ ಆರೈಕೆ ಮಾಡಿದ ಡಾ.ರಾಮಚಂದ್ರ ಭಟ್, ಡಾ.ವಿನಾಯಕ ಜನ್ನು, ಡಾ.ಬೃಂದಾ ಕವಿ ಹಾಗೂ ನರ್ಸಿಂಗ್ ತಂಡವನ್ನು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ. ದಯಾನಂದ, ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಾಜೇಶ ಪವಾರ, ಕಾಹೆರನ ಉಪಕುಲಪತಿ ಡಾ.ಎನ್.ಎಸ್. ಮಹಾಂತಶೆಟ್ಟಿ, ಕುಲಸಚಿವ ಡಾ.ವಿ.ಎಂ. ಪಟ್ಟಣಶೆಟ್ಟಿ ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.