ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಐಟಿ: ಅತ್ಯಾಧುನಿಕ ಏರೊಡೈನಾಮಿಕ್ಸ್ ಲ್ಯಾಬ್ ಉದ್ಘಾಟನೆ

Last Updated 26 ಮಾರ್ಚ್ 2021, 16:02 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕೆಎಲ್ಎಸ್ ಗೋಗಟೆ ತಾಂತ್ರಿಕ ಕಾಲೇಜಿನ ಏರೊನಾಟಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಅತ್ಯಾಧುನಿಕ ಏರೊಡೈನಾಮಿಕ್ಸ್ ಲ್ಯಾಬ್ ಮತ್ತು ಏರ್‌ಕ್ರಾಫ್ಟ್ ಪ್ರೊಪಲ್ಷನ್ ಲ್ಯಾಬ್‌ ಅನ್ನು ಕರ್ನಾಟಕ ಲಾ ಸೊಸೈಟಿ ಅಧ್ಯಕ್ಷ ಅನಂತ ಮಂಡಗಿ ಶುಕ್ರವಾರ ಉದ್ಘಾಟಿಸಿದರು.

‘ಶೈಕ್ಷಣಿಕ ಪಠ್ಯಕ್ರಮದ ಒಂದು ಭಾಗವಾಗಿ ಏರೋನಾಟಿಕಲ್ ಎಂಜಿನಿಯರಿಂಗ್ ವಿಭಾಗವು ವಿದ್ಯಾರ್ಥಿಗಳ ಕೌಶಲ ಹೆಚ್ಚಿಸಲು ಎಚ್‌ಎಎಲ್ ಚಾಲಿತ ಎಲೆಕ್ಟಿವ್‌ಗಳನ್ನು ನೀಡುತ್ತಿದೆ. ಸ್ಕೇಲ್ಡ್ ಮಾಡೆಲ್‌ಗಳು ಮತ್ತು ವಿಮಾನ ಎಂಜಿನ್ ಕಾರ್ಯಕ್ಷಮತೆಯ ಗುಣಲಕ್ಷಣಗಳ ಬಗ್ಗೆ ತರಬೇತಿ ನೀಡುವುದು ಈ ಪ್ರಯೋಗಾಲಯಗಳ ಸ್ಥಾಪನೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ’ ಎಂದು ಜಿಐಟಿ ಪ್ರಾಂಶುಪಾಲ ಡಾ.ಜಯಂತ್ ಕೆ. ಕಿತ್ತೂರ ತಿಳಿಸಿದರು.

‘ಈ ಲ್ಯಾಬ್‌ಗಳು ವಾಯುಬಲವಿಜ್ಞಾನ ಮತ್ತು ವಿಮಾನ ಪ್ರೊಪಲ್ಷನ್ ಡೊಮೇನ್‌ಗಳಲ್ಲಿ ವಿವಿಧ ಸಂಶೋಧನೆಗಳನ್ನು ಕೈಗೊಳ್ಳಲು ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ಸಹಾಯ ಮಾಡುತ್ತದೆ. ಪ್ರಾಜೆಕ್ಟ್ ವರ್ಕ್ಸ್, ಏರೊಮಾಡೆಲಿಂಗ್ ಮತ್ತು ಡ್ರೋಣ್‌ನಂತಹ ಮಾನವರಹಿತ ವೈಮಾನಿಕ ವಾಹನಗಳು, ಫ್ಲೈಯಿಂಗ್ ಮೆಷಿನ್‌ಗಳ ಸೃಜನಾತ್ಮಕ ಚಿಂತನೆ ಮುಂತಾದ ಚಟುವಟಿಕೆಗಳನ್ನು ಕೈಗೊಳ್ಳಲು ನೆರವಾಗುತ್ತವೆ’ ಎಂದು ಮಾಹಿತಿ ನೀಡಿದರು.

ಕರ್ನಾಟಕ ಲಾ ಸೊಸೈಟಿ ಅಧ್ಯಕ್ಷ ಪ್ರದೀಪ ಸಾವಕಾರ, ಕೆಎಲ್‌ಎಸ್ ಜಿಐಟಿ ಅಧ್ಯಕ್ಷ ಎಂ.ಆರ್. ಕುಲಕರ್ಣಿ ಮತ್ತು ಸದಸ್ಯರು, ಏರೊನಾಟಿಕಲ್ ವಿಭಾಗದ ಮುಖ್ಯಸ್ಥ ಡಾ.ಟಿ.ಆರ್. ಅನಿಲ್ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT