ಬೆಳಗಾವಿ: ಇಲ್ಲಿನ ನಗರ ಬಸ್ ನಿಲ್ದಾಣ(ಸಿಬಿಟಿ)ದಲ್ಲಿ ಪಂತಬಾಳೇಕುಂದ್ರಿ-ಸಿಬಿಟಿ ಮಾರ್ಗದ ಬಸ್ನಲ್ಲಿ ಕಿಟಕಿ ಸೀಟಿಗಾಗಿ ಅಪರಿಚಿತ ಯುವಕರು ಮತ್ತು ವಿದ್ಯಾರ್ಥಿ ಮಧ್ಯೆ ಬುಧವಾರ ನಡೆದಿದ್ದು, ವಿದ್ಯಾರ್ಥಿಗೆ ಚಾಕುವಿನಿಂದ ಇರಿಯಲಾಗಿದೆ.

ಈ ಘಟನೆಯಲ್ಲಿ ಮಾಜ್ ರಶೀದ್ ಸನದಿ(19) ಎಂಬುವರು ಗಾಯಗೊಂಡಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಪಂತಬಾಳೇಕುಂದ್ರಿ-ಸಿಬಿಟಿ ಬಸ್ನಲ್ಲಿ ಬೆಳಗಾವಿ ನಗರಕ್ಕೆ ಬರುತ್ತಿದ್ದಾಗ, ಕಿಟಕಿ ಸೀಟಿನ ವಿಚಾರವಾಗಿ ಮಾಜ್ ಮತ್ತು ಕೆಲವು ಅಪರಿಚಿತ ಯುವಕರ ಮಧ್ಯೆ ವಾಗ್ವಾದ ನಡೆದಿತ್ತು. ಇದು ವಿಕೋಪಕ್ಕೆ ಹೋಗಿದ್ದರಿಂದ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

‘ಅಪರಿಚಿತ ಯುವಕರು ವಿದ್ಯಾರ್ಥಿಗೆ ಚಾಕುವಿನಿಂದ ಇರಿದಿದ್ದಾರೆ. ಆರೋಪಿಗಳ ಪತ್ತೆಗೆ ಕ್ರಮ ವಹಿಸಿದ್ದೇವೆ. ಎಲ್ಲ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದೇವೆ’ ಎಂದು ನಗರ ಪೊಲೀಸ್ ಉಪ ಆಯುಕ್ತ(ಕಾನೂನು ಮತ್ತು ಸುವ್ಯವಸ್ಥೆ) ರೋಹನ್ ಜಗದೀಶ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.