ಮಂಗಳವಾರ, ಜನವರಿ 28, 2020
23 °C

ಕೆಪಿಎಸ್‌ಸಿ: ರಾಧಿಕಾ ಧೂತ್‌ಗೆ ಸಿಟಿಒ ಗರಿ

ಬಸವರಾಜ ಅ.ನಾಡಗೌಡ Updated:

ಅಕ್ಷರ ಗಾತ್ರ : | |

Prajavani

ಇಳಕಲ್: ಸತತ ಪ್ರಯತ್ನದ ಮೂಲಕ ಕೆಎಎಸ್ ಪಾಸಾಗಿ ಸಾರ್ವಜನಿಕ ಆಡಳಿತ ಸೇವೆಗೆ ಸೇರುವ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ ನಗರದ ರಾಧಿಕಾ ಘನಶ್ಯಾಮ ಧೂತ್. 

ರಾಧಿಕಾ ಇಲ್ಲಿನ ಎಸ್.ವಿ.ಎಂ ವಿದ್ಯಾವರ್ಧಕ ಸಂಘದ ಬಿ.ಬಿ.ಜಹಗೀರದಾರ ಬಿಬಿಎ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.  

  ರಾಧಿಕಾ 'ಗ್ರಾಮೀಣ ಅಭಿವೃದ್ಧಿ' ಐಚ್ಛಿಕ ವಿಷಯವನ್ನು ಆಯ್ಕೆ ಮಾಡಿಕೊಂಡು ಕೆಎಎಸ್ ಪರೀಕ್ಷೆ ಬರೆದು ತಮ್ಮ‌ ಎರಡನೇ ಪ್ರಯತ್ನದಲ್ಲಿ ಗುರಿ ತಲುಪಿದ್ದಾರೆ.    

ವಾಣಿಜ್ಯ ತೆರಿಗೆ ನಿರೀಕ್ಷಕಿ (ಸಿಟಿಐ) ಯಾಗಿ ಗದಗದಲ್ಲಿ ಕೆಲಸ ಮಾಡುತ್ತಲೇ ಪರೀಕ್ಷೆ ಬರೆದರು. ಈಗ ಕೆಎಸ್ಎಸ್ ಪಾಸಾಗುವ ಮೂಲಕ ವಾಣಿಜ್ಯ ತೆರಿಗೆ ಇಲಾಖೆ ಆಧಿಕಾರಿ (ಸಿಟಿಓ) ಯಾಗಿ ಆಯ್ಕೆಯಾಗಿದ್ದಾರೆ.

ಎಸ್.ವಿ.ಎಂ ಪದವಿ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಗೋವಿಂದರೆಡ್ಡಿ ಅವರು ಕೆಎಎಸ್ ಪರೀಕ್ಷೆ ಪಾಸಾಗಿ ಉಪವಿಭಾಗಾಧಿಕಾರಿಯಾದದ್ದು ರಾಧಿಕಾ ಅವರಿಗೆ ಪ್ರೇರಣೆಯಾಯಿತು. ತಮ್ಮ ಈ ಸಾಧನೆಗೆ ತಂದೆ, ತಾಯಿ, ಅತ್ತೆ, ಮಾವ ಹಾಗೂ ಪತಿ ವಿಕಾಸ ಹಿರೇಮಠ ಅವರ ಪ್ರೋತ್ಸಾಹವೇ ಕಾರಣ. ಕೆಎಎಸ್  ಪರೀಕ್ಷೆಯ ಸಿದ್ಧತೆಗೆ ಎಲ್ಲರೂ ಸಹಕಾರ ನೀಡಿದರು ಎಂದು ಸ್ಮರಿಸಿಕೊಳ್ಳುತ್ತಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು