ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಟಿಸಿಎಲ್‌ ಪರೀಕ್ಷಾ ಅಕ್ರಮ: ಮತ್ತೊಬ್ಬ ಆರೋಪಿ ಬಂಧನ

Last Updated 19 ಜನವರಿ 2023, 15:52 IST
ಅಕ್ಷರ ಗಾತ್ರ

ಬೆಳಗಾವಿ: ಕೆಪಿಟಿಸಿಎಲ್‌ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ, ಪೊಲೀಸರು ಗುರುವಾರ ಇನ್ನೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ 51ಕ್ಕೆ ಏರಿದೆ.

ಗೋಕಾಕ ತಾಲ್ಲೂಕಿನ ಉಪ್ಪಾರಟ್ಟಿಯ ಹನುಮಂತ ಮಲ್ಲಪ್ಪ ಗುದಿಗೊಪ್ಪ (22) ಬಂಧಿತ. ಈಗಾಗಲೇ ಬಂಧಿತರಾದ ಸಂಜೀವ ಭಂಡಾರಿ, ಬಾಳೇಶ ಕಟ್ಟಿಕಾರ, ಸಿದ್ದಪ್ಪ ಮದಿಹಳ್ಳಿ, ಭೀಮಪ್ಪ ಗುದಿಗೋಪ್ಪ ಅವರೊಂದಿಗೆ ಹನುಮಂತ ಕೂಡ ಸೇರಿದ್ದ. ಇವರೆಲ್ಲರೂ ಕೂಡಿಕೊಂಡು ಏಳು ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದೊಳಗೆ ಎಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋಚಿಪ್‌ ತಲುಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT