ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗವಾಡ | ₹1.11 ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಚಾಲನೆ

Published 8 ಜನವರಿ 2024, 13:47 IST
Last Updated 8 ಜನವರಿ 2024, 13:47 IST
ಅಕ್ಷರ ಗಾತ್ರ

ಕಾಗವಾಡ: ತಾಲ್ಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ಹಾಗೂ ಉಗಾರ ಬಿ.ಕೆ ಗ್ರಾಮದ ಹೊರವಲಯದ ದೊಂಡಿ ಮಡ್ಡಿ ವಸತಿಯಲ್ಲಿ ₹1.11 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ರಾಜು ಕಾಗೆ ಸೋಮವಾರ ಭೂಮಿ ಪೂಜೆ ಮಾಡಿ ಚಾಲನೆ ನೀಡಿದರು.

ಉಗಾರ ಬಿ.ಕೆ ಗ್ರಾಮದ ಹೊರವಲಯದ ದೊಂಡಿ ಮಡ್ಡಿ ವಸತಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಯೋಜನೆಯಲ್ಲಿ ಮಂಜೂರಾದ ₹1 ಕೋಟಿ ವೆಚ್ಚದ ಸಿ.ಸಿ ರಸ್ತೆ ನಿರ್ಮಾಣ ಹಾಗೂ ಉಗಾರ ಖುರ್ದ ಪಟ್ಟಣದ ಸಾರ್ವಜನಿಕ ಸ್ಮಶಾನ ಭೂಮಿಯ ಅಭಿವೃದ್ಧಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾದ ₹6.42 ಲಕ್ಷ ವೆಚ್ಚದ ಕಾಮಗಾರಿ ಹಾಗೂ ₹5 ಲಕ್ಷ ವೆಚ್ಚದ ಉಗಾರ ಖುರ್ದದಿಂದ ಉಗಾರ ಬುದ್ರುಕ ಒಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕರು, ‘ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಗುಣಮಟ್ಟದ ಕಾಮಗಾರಿ ಕೈಗೊಂಡು ಕಾಲಮಿತಿಯಲ್ಲಿ ಮುಗಿಸಿ ಸಾರ್ವಜನಿಕರಿಗೆ ಅನಕೂಲ ಮಾಡಿಕೊಡಬೇಕು’ ಎಂದು ಸೂಚಿಸಿದರು.

ಮುಖಂಡರಾದ ರಾಹುಲ ಶಾಹ, ವಸಂತ ಖೋತ, ಸಚಿನ ಪೂಜಾರಿ, ಅಜೀತ ಅಕ್ಕಿವಾಟೆ, ವಿಪುಲ ಪಾಟೀಲ, ಮಹೇಶ ಕುಸುನಾಳೆ, ಶೇಖರ ಕಾಟಕರ, ಪ್ರಕಾಶ ಸಾಜನೆ, ಗುತ್ತಿಗೆದಾರರ ಎಂ.ಬಿ ಪಾಟೀಲ, ಸಂದೀಪ ಕರಾಡೆ, ಪಂಚಾಯಿತಿ ರಾಜ್ಯ ಅಥಣಿ ವಿಭಾಗದ ಎಂಜಿನಿಯರ್ ಅಮರ ಮೈತ್ರಿ, ಸಾಗರ ಪೂಜಾರಿ, ಸಾವನ ಗೊಂದಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT