ಬೆಳಗಾವಿ: ‘ಬೆಳಗಾವಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಗೆ ಬರುವ 114 ಹಳ್ಳಿಗಳನ್ನೂ ಅಭಿವೃದ್ಧಿಪಡಿಸುವುದು ನನ್ನ ಗುರಿ. ಸತತ ಎರಡು ಬಾರಿ ಆಶೀರ್ವಾದ ಮಾಡಿರುವ ಕ್ಷೇತ್ರದ ಜನರ ಸೇವೆಗೆ ನಿರಂತರ ಕೆಲಸ ಮಾಡುತ್ತಿದ್ದೇನೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಬಡಸ್ ಕೆ.ಎಚ್. ಗ್ರಾಮದ ಮಡಿವಾಳೇಶ್ವರ ಮಠದ ಕಟ್ಟಡದ ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಗ್ರಾಮದ ಬಹುದಿನಗಳ ಬೇಡಿಕೆಯಾಗಿದ್ದ ಮಡಿವಾಳೇಶ್ವರ ಮಠದ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಮಠದ ಕಟ್ಟಡ ನಿರ್ಮಾಣ ಭರವಸೆ ಈಡೇರಿಸುತ್ತಿದ್ದು, ಮುಂದಿನ ಶ್ರಾವಣದ ವೇಳೆ ಸುಸಜ್ಜಿತ ಮಠ ನಿರ್ಮಾಣವಾಗಲಿದೆ’ ಎಂದರು.

‘ಮಠದ ಕಟ್ಟಡ ನಿರ್ಮಾಣಕ್ಕೆ ₹1.25 ಕೋಟಿ ಈಗಾಗಲೇ ಬಿಡುಗಡೆಯಾಗಿದ್ದು, ಇನ್ನೂ ₹25 ಲಕ್ಷ ಕೊಡುತ್ತೇನೆ. ಆದಷ್ಟು ಬೇಗ ಮಠ ನಿರ್ಮಾಣವಾಗಿ, ನಮ್ಮ ಸಮಾಜಕ್ಕೆ ಸೇವೆ ಸಲ್ಲಿಸುವಂತಾಗಲಿ’ ಎಂದರು.

ಬಡಸ್ ಮಡಿವಾಳೇಶ್ವರ ಮಠದ ಗ್ರಾಮದ ಪ್ರಶಾಂತ ದೇವರು, ಬಿಜಾಪುರದ ಪ್ರಭುದೇವರು, ಸಿ.ಸಿ.ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಕುರಬರ್, ಮನ್ಸೂರ್ ಅಲಿ ಅತ್ತಾರ್, ಸುರೇಶ ಇಟಗಿ, ರವಿ ಮೇಳೆದ್, ಬಸವಂತ್ ನಾಯಿಕ್, ಭರಮಣ್ಣ ಶೀಗಿಹಳ್ಳಿ, ಫಕೀರ್ ಶೀಗಿಹಳ್ಳಿ, ಸಿದ್ದು ಸಂಪಗಾವ, ಇನಾಯತ್ ಅತ್ತಾರ್, ಪರ್ವತಗೌಡ ಪಾಟೀಲ, ಗೌಸ್ ಸಿಂಪಿ, ಬಸವರಾಜ ಕಲಾರಕೊಪ್ಪ, ಭೀಮಶಿ ಹಾದಿಮನಿ, ರಾಮನಗೌಡ ಮದಲಭಾವಿ, ಸಂತೋಷ ಬಂದವ್ವಗೋಳ, ಸುನೀಲ್, ನಾಗಪ್ಪ ಇತರರು ಇದ್ದರು.

ಕಾಂಕ್ರೀಟ್ ರಸ್ತೆ ಕಾಮಗಾರಿ: ಹಲಗಾ ಗ್ರಾಮದ ಅಂಬೇಡ್ಕರ್ ಗಲ್ಲಿಯಲ್ಲಿ ಸುಮಾರು ₹33.53 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳು ಭಾನುವಾರ ಚಾಲನೆ ನೀಡಿದರು.

ಸಿದ್ದು ಕುರಂಗಿ, ಚೇತನ ಕುರಂಗಿ, ರಾಜೇಶ ವಡಗಾಂವಿ, ಸರೋಜಿನಿ ವಡಗಾಂವಿ, ಲಕ್ಷ್ಮೀ ಮೇದಾರ, ರೇಖಾ ದೇಸಾಯಿ, ರೂಪಾ ಸುತಾರ, ಎಂ.ಗಣಪತ, ಲಕ್ಷ್ಮೀ ಸಂತಾಜಿ, ಕೃಷ್ಣ ಸಂತಾಜಿ, ಚಂದ್ರಕಾಂತ ಕಾಮೋಜಿ, ಮಹಾವೀರ ಪಾಟೀಲ, ಸಾಗರ ಕಾಮನಾಚೆ, ವಿಲಾಸ ಪರಿಟ್, ಭುಜಂಗ ಸಾಲ್ಗುಡೆ, ನಜೀರ್ ಮುಲ್ಲಾ, ಆಪ್ತ ಸಹಾಯಕ ಮಹಾಂತೇಶ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

ಪೋಸ್ಟರ್ ಬಿಡುಗಡೆ: ಕೃಷಿ ಇಲಾಖೆಯ ಬೆಳೆ ಸಮೀಕ್ಷೆ ‘ನನ್ನ ಬೆಳೆ ನನ್ನ ಹಕ್ಕು’ ಎಂಬ ಮಾಹಿತಿ ಪೋಸ್ಟರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಬಿಡುಗಡೆಗೊಳಿಸಿದರು.

ಗೃಹಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ ಸಚಿವರು ರೈತರಿಗೆ ಸರಿಯಾದ ಮಾಹಿತಿ, ಮಾರ್ಗದರ್ಶನ ನೀಡುವಂತಹ ಕೆಲಸವನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಚ್.ಡಿ.ಕೋಳೇಕರ, ಸಹಾಯಕ ಕೃಷಿ ನಿದೇಶಕ ಎಂ.ಎಸ್.ಪಟಗುಂದಿ ಇದ್ದರು.

ಗ್ರಾಮಸ್ಥರೊಂದಿಗೆ ಸಚಿವೆ ಚರ್ಚೆ

ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತಂತೆ ಕ್ಷೇತ್ರದ ಶಾಸಕಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಭಾನುವಾರ ಸುದೀರ್ಘ ಚರ್ಚೆ ನಡೆಸಿದರು. ಕಂಗ್ರಾಳಿ ಬಿ.ಕೆ ನಿಲಜಿ ದೇಸೂರ ಸಾಂಬ್ರಾ ಸೇರಿದಂತೆ ಅನೇಕ ಗ್ರಾಮಗಳ ಮುಖಂಡರು ವಿವಿಧ ದೇವಸ್ಥಾನಗಳ ಸಮಿತಿಯ ಸದಸ್ಯರು ಹಾಗೂ ವಾರ್ಕರಿ ಮಂಡಳಿಯವರ ಜೊತೆ ಗೃಹ ಕಚೇರಿಯಲ್ಲಿ ಸಭೆ ನಡೆಸಿದರು. ಆಯಾ ಗ್ರಾಮಗಳಲ್ಲಿ ಆಗಬೇಕಿರುವ ಕೆಲಸಗಳು ಮುಂದಿನ ದಿನಗಳಲ್ಲಿ ಜರುಗಲಿರುವ ಜಾತ್ರಾ ಮಹೋತ್ಸವಗಳ ಹಿನ್ನೆಲೆಯಲ್ಲಿ ಅಭಿವೃದ್ಧಿ ಕೆಲಸಗಳ ಕುರಿತಾಗಿ ಸುದೀರ್ಘ ಕಾಲ ಚರ್ಚೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಎಲ್ಲ ಮುಖಂಡರ ದೇವಸ್ಥಾನಗಳ ಸಮಿತಿಯ ಸದಸ್ಯರ ವಾರ್ಕರಿ ಮಂಡಳಿಯವರ ಹಾಗೂ ವಿವಿಧ ಸ್ಥಳಗಳಿಂದ ಆಗಮಿಸಿದ್ದ ಸಾರ್ವಜನಿಕರ ಮನವಿಗಳಿಗೆ ಸ್ಪಂದಿಸಿದರು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಯುವರಾಜ ಕದಂ ಹಾಗೂ ಕ್ಷೇತ್ರದ ಹಲವಾರು ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.